ADVERTISEMENT

Covid-19 India Update: ದೇಶದಲ್ಲಿ 71 ಲಕ್ಷ ದಾಟಿದ ಒಟ್ಟು ಪ್ರಕರಣಗಳು

ಪಿಟಿಐ
Published 12 ಅಕ್ಟೋಬರ್ 2020, 6:09 IST
Last Updated 12 ಅಕ್ಟೋಬರ್ 2020, 6:09 IST
ಭುವನೇಶ್ವರದಲ್ಲಿ ಕಲಾವಿದರು ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸುವ ಚಿತ್ರಗಳನ್ನು ರಚಿಸುತ್ತಿರುವುದು–ಸಂಗ್ರಹ ಚಿತ್ರ
ಭುವನೇಶ್ವರದಲ್ಲಿ ಕಲಾವಿದರು ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸುವ ಚಿತ್ರಗಳನ್ನು ರಚಿಸುತ್ತಿರುವುದು–ಸಂಗ್ರಹ ಚಿತ್ರ   

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌–19 ದೃಢಪಟ್ಟ 66,732 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 71 ಲಕ್ಷ ದಾಟಿದ್ದು, ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ 86.36ಕ್ಕೆ ಏರಿಕೆಯಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ತಿಳಿಸಿದೆ.

ಒಟ್ಟು 71,20,538 ಪ್ರಕರಣಗಳ ಪೈಕಿ 61,49,536 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೂ 1,09,150 ಮಂದಿ ಸಾವಿಗೀಡಾಗಿದ್ದು, ಕಳೆದ 24 ಗಂಟೆಗಳಲ್ಲಿ 816 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಪ್ರಸ್ತುತ ದೇಶದಲ್ಲಿ 8,61,853 ಸಕ್ರಿಯ ಪ್ರಕರಣಗಳಿವೆ. ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 12.10ರಷ್ಟಿದೆ. ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆ ಶೇ 1.53ಕ್ಕೆ ಇಳಿಕೆಯಾಗಿದೆ.

ADVERTISEMENT

ಆಗಸ್ಟ್ 7ರಂದು ದೇಶದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ 20 ಲಕ್ಷ ದಾಟಿತು, ಆಗಸ್ಟ್ 23ರಂದು 30 ಲಕ್ಷ ಪ್ರಕರಣಗಳು, ಸೆಪ್ಟೆಂಬರ್‌ 5ಕ್ಕೆ 40 ಲಕ್ಷ ಪ್ರಕರಣಗಳಾದವು. ಸೆಪ್ಟೆಂಬರ್‌ 16ಕ್ಕೆ 50 ಲಕ್ಷ ಕೋವಿಡ್‌ ಪ್ರಕರಣಗಳು ದಾಖಲಾದರೆ, ಸೆಪ್ಟೆಂಬರ್‌ 28ಕ್ಕೆ 60 ಲಕ್ಷ ಹಾಗೂ ಅಕ್ಟೋಬರ್ 11ರಂದು ಪ್ರಕರಣಗಳ ಸಂಖ್ಯೆ 70 ಲಕ್ಷ ದಾಟಿದೆ.

ಐಸಿಎಂಆರ್‌ ಪ್ರಕಾರ, ಅಕ್ಟೋಬರ್‌ 11ರ ವರೆಗೂ ದೇಶದಲ್ಲಿ 8,78,72,093 ಗಂಟಲು ದ್ರವ ಮಾದರಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಭಾನುವಾರ 9,94,851 ಮಾದರಿಗಳ ಪರೀಕ್ಷೆ ನಡೆದಿರುವುದಾಗಿ ಹೇಳಿದೆ.

ದೇಶದಲ್ಲಿ ವರದಿಯಾಗಿರುವ 1,09,150 ಸಾವು ಪ್ರಕರಣಗಳ ಪೈಕಿ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 40,349 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 10,252 ಜನ, ಕರ್ನಾಟಕದಲ್ಲಿ 9,966 ಜನ, ಉತ್ತರ ಪ್ರದೇಶದಲ್ಲಿ 6,394 ಮಂದಿ, ಆಂಧ್ರ ಪ್ರದೇಶದಲ್ಲಿ 6,224 ಮಂದಿ, ದೆಹಲಿಯಲ್ಲಿ 5,769 ಮಂದಿ, ಪಶ್ಚಿಮ ಬಂಗಾಳದಲ್ಲಿ 5,622 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.