
ಇ.ಯು ನಾಯಕರಾದ ಉರ್ಸುಲಾ ಫಾಂಡರ್ ಲೇಯನ್ ಮತ್ತು ಆ್ಯಂಟೊನಿಯೊ ಕೋಸ್ಟಾ ಅವರ ಜತೆ ಪ್ರಧಾನಿ ನರೇಂದ್ರ ಮೋದಿ
–ಪಿಟಿಐ ಚಿತ್ರ
ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಮಾತುಕತೆ ಪೂರ್ಣಗೊಂಡಿದೆ ಎಂದು ಭಾರತ ಮತ್ತು ಇ.ಯು. ಘೋಷಿಸಿವೆ. ಇದರ ಬೆನ್ನಲ್ಲೇ ಯಾವ್ಯಾವ ರಾಜ್ಯಗಳಿಗೆ ಏನೆಲ್ಲಾ ಲಾಭವಾಗಲಿದೆ ಎಂಬ ಲೆಕ್ಕಾಚಾರವೂ ಜೋರಾಗಿದೆ.
ಈ ಒಪ್ಪಂದವು ಜಾರಿಗೆ ಬಂದ ನಂತರದಲ್ಲಿ ಭಾರತದಿಂದ ಐರೋಪ್ಯ ಒಕ್ಕೂಟದ ದೇಶಗಳಿಗೆ ರಫ್ತಾಗುವ ಶೇಕಡ 93ರಷ್ಟು ಉತ್ಪನ್ನಗಳು ಸುಂಕ ರಹಿತವಾಗಿ ಅಲ್ಲಿನ ಮಾರುಕಟ್ಟೆ ಪ್ರವೇಶಿಸಲಿವೆ. ಅಲ್ಲದೆ, ಐರೋಪ್ಯ ಒಕ್ಕೂಟದ ದೇಶಗಳ ಐಷಾರಾಮಿ ಕಾರುಗಳು ಹಾಗೂ ವೈನ್‌ಗಳ ಬೆಲೆಯು ಭಾರತದಲ್ಲಿ ಕಡಿಮೆ ಆಗಲಿದೆ.
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಪ್ರಕಟಣೆ ಹೊರಬಿದ್ದ ನಂತರದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ದೇಶದ ಯಾವ ರಾಜ್ಯದ ಯಾವ ವಲಯಕ್ಕೆ ಹೆಚ್ಚಿನ ಪ್ರಯೋಜನ ಆಗಬಹುದು ಎಂಬ ವಿವರಗಳನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯದ ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ವೈದ್ಯಕೀಯ ಉಪಕರಣಗಳು, ಜವಳಿ ಹಾಗೂ ಉಡುಪು ವಲಯಕ್ಕೆ ಒಪ್ಪಂದವು ಪ್ರಯೋಜನ ತಂದುಕೊಡಲಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯದ ಸಮುದ್ರ ಉತ್ಪನ್ನಗಳು, ರಾಸಾಯನಿಕಗಳು, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಪ್ರಯೋಜನವಾಗಲಿದೆ.
ರಾಜ್ಯದ ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ವೈದ್ಯಕೀಯ ಉಪಕರಣಗಳು, ಜವಳಿ ಹಾಗೂ ಉಡುಪು ವಲಯಕ್ಕೆ ನೆರವಾಗಲಿದೆ.
ರಾಜ್ಯದ ಚರ್ಮ ಮತ್ತು ಪಾದರಕ್ಷೆಗಳು, ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಪ್ರಯೋಜನವಾಗಲಿದೆ.
ರಾಜ್ಯದ ಸಮುದ್ರ ಉತ್ಪನ್ನಗಳು, ಚಹಾ ಪದಾರ್ಥಗಳು, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಉತ್ತೇಜನ ಸಿಗಲಿದೆ.
ರಾಜ್ಯದ ರತ್ನ ಮತ್ತು ಆಭರಣಗಳು, ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಅನುಕೂಲವಾಗಲಿದೆ.
ರಾಜ್ಯದ ಸಮುದ್ರ ಉತ್ಪನ್ನಗಳು, ಚಹಾ ಪದಾರ್ಥಗಳು, ಕರಕುಶಲ ವಸ್ತುಗಳ ವಲಯಕ್ಕೆ ಪ್ರಯೋಜನವಾಗಲಿದೆ.
ಪೀಠೋಪಕರಣಗಳು, ಖನಿಜಗಳು, ಚಹಾ ಪದಾರ್ಥಗಳು, ಕರಕುಶಲ ವಸ್ತುಗಳು, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಅನುಕೂಲವಾಗಲಿದೆ.
ಚರ್ಮ ಮತ್ತು ಪಾದರಕ್ಷೆಗಳು, ಪೀಠೋಪಕರಣಗಳು, ಕರಕುಶಲ ವಸ್ತುಗಳು, ಎಲೆಕ್ಟ್ರಾನಿಕ್ಸ್, ಕೃಷಿ ಯಂತ್ರೋಪಕರಣಗಳ ವಲಯಕ್ಕೆ ನೆರವಾಗಲಿದೆ.
ರಾಜ್ಯದ ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ವೈದ್ಯಕೀಯ ಉಪಕರಣಗಳು, ಸಮುದ್ರ ಉತ್ಪನ್ನಗಳು, ರತ್ನ ಮತ್ತು ಆಭರಣಗಳು, ಜವಳಿ ಹಾಗೂ ಉಡುಪು ವಲಯಕ್ಕೆ ಪ್ರಯೋಜನ.
ಕ್ರೀಡಾ ಸರಕುಗಳು, ಕರಕುಶಲ ವಸ್ತುಗಳು, ರತ್ನ ಮತ್ತು ಆಭರಣಗಳು, ಪೀಠೋಪಕರಣಗಳು, ಜವಳಿ ಹಾಗೂ ಉಡುಪು ವಲಯಕ್ಕೆ ಮುಕ್ತ ವ್ಯಾಪಾರ ಒಪ್ಪಂದ ವರದಾನವಾಗಲಿದೆ.
ರಾಜ್ಯದ ಜವಳಿ ಹಾಗೂ ಉಡುಪು, ರಾಸಾಯನಿಕಗಳು, ಕ್ರೀಡಾ ಸರಕುಗಳು, ಕೃಷಿ ಯಂತ್ರೋಪಕರಣಗಳ ವಲಯಕ್ಕೆ ನೆರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.