ADVERTISEMENT

ಯುದ್ಧ ನಮಗೆ ಕಡೇ ಆಯ್ಕೆ: ಕಾರ್ಗಿಲ್‌ನಲ್ಲಿ ದೀಪಾವಳಿ ಆಚರಿಸಿ ಪ್ರಧಾನಿ ಹೇಳಿಕೆ

ಪಿಟಿಐ
Published 24 ಅಕ್ಟೋಬರ್ 2022, 7:55 IST
Last Updated 24 ಅಕ್ಟೋಬರ್ 2022, 7:55 IST
ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ನರೇಂದ್ರ ಮೋದಿ ಅವರು, ಬಂದೂಕುಗಳನ್ನು ಪರಿಶೀಲಿಸಿದರು.
ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ನರೇಂದ್ರ ಮೋದಿ ಅವರು, ಬಂದೂಕುಗಳನ್ನು ಪರಿಶೀಲಿಸಿದರು.    

ಕಾರ್ಗಿಲ್‌: ಭಾರತವು ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆಯಾಗಿ ನೋಡುತ್ತದೆ. ಆದರೆ ರಾಷ್ಟ್ರದ ಮೇಲೆ ಕೆಟ್ಟ ದೃಷ್ಟಿ ಬೀರುವ ಯಾರಿಗೇ ಆದರೂ ತಕ್ಕ ಉತ್ತರ ನೀಡಲು ಸಶಸ್ತ್ರ ಪಡೆಗಳು ಶಕ್ತವಾಗಿವೆ. ತಂತ್ರಗಾರಿಕೆಗಳು ಇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಕಾರ್ಗಿಲ್‌ನಲ್ಲಿ ಸಶಸ್ತ್ರ ಪಡೆಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೀಪಾವಳಿ ಆಚರಿಸಿದರು. 1999 ರಲ್ಲಿ ಕಾರ್ಗಿಲ್ ಸಂಘರ್ಷದ ವೇಳೆಭಾರತೀಯ ಸೇನೆಯು ಭಯೋತ್ಪಾದನೆಯ ಹುನ್ನಾರವನ್ನು ಹತ್ತಿಕ್ಕಿದ ನಂತರ, ಗಡಿಗೆ ಭೇಟಿ ನೀಡಿದ್ದನ್ನು ಪ್ರಧಾನಿ ಈ ವೇಳೆ ಸ್ಮರಿಸಿದರು.

ದೀಪಾವಳಿ ಎಂದರೆ 'ಭಯೋತ್ಪಾದನೆಯ ಅಂತ್ಯದ ಹಬ್ಬ'. ಕಾರ್ಗಿಲ್ ಅದನ್ನು ಸಾಧ್ಯವಾಗಿಸಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.