ADVERTISEMENT

ಮಹತ್ವಾಕಾಂಕ್ಷೆಯೇ ಮೈವೆತ್ತ ಭಾರತ..ಶುಕ್ಲಾಗೆ ಅಂತರಿಕ್ಷದಿಂದ ದೇಶ ಕಂಡಿದ್ದು ಹೀಗೆ

ಪಿಟಿಐ
Published 13 ಜುಲೈ 2025, 16:10 IST
Last Updated 13 ಜುಲೈ 2025, 16:10 IST
<div class="paragraphs"><p>ಶುಭಾಂಶು ಶುಕ್ಲಾ</p></div>

ಶುಭಾಂಶು ಶುಕ್ಲಾ

   

ನವದೆಹಲಿ: ‘ಅಂತರಿಕ್ಷದಿಂದ ಕಣ್ಣು ಹಾಯಿಸಿದಾಗ, ಭಾರತವು ಮಹತ್ವಾಕಾಂಕ್ಷೆಯೇ ಮೈವೆತ್ತಿದಂತೆ ಕಾಣುತ್ತದೆ. ಯಾವುದೇ ಅಂಜಿಕೆ ಇಲ್ಲದ; ಆತ್ಮವಿಶ್ವಾಸ ಹಾಗೂ ಹೆಮ್ಮೆಯಿಂದ ಬೀಗುವ ದೇಶವಾಗಿ ಗಮನ ಸೆಳೆಯುತ್ತದೆ’ ಎಂದು ಗಗನಯಾನಿ ಶುಭಾಂಶು ಶುಕ್ಲಾ ಭಾನುವಾರ ಹೇಳಿದ್ದಾರೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ‘ಆಕ್ಸಿಯಂ–4’ ಬಾಹ್ಯಾಕಾಶ ಕಾರ್ಯಕ್ರಮದ ಗಗನಯಾನಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.

ADVERTISEMENT

ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳು ಭೂಮಿಯತ್ತ ಸೋಮವಾರ ಮರುಪ್ರಯಾಣ ಕೈಗೊಳ್ಳಲಿದ್ದಾರೆ. ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಮಂಗಳವಾರ ಇಳಿಯುವ ಸಾಧ್ಯತೆ ಇದೆ.

‘ಈ ಅಂತರಿಕ್ಷ ಯಾನ ನನ್ನಲ್ಲಿ ಅಲೌಕಿಕ ಭಾವನೆ ಮೂಡಿಸುತ್ತಿದೆ. ನನ್ನ ಪಾಲಿಗೆ ಇದೊಂದು ಅದ್ಭುತ ಪಯಣ. ನಾನು ಅಪಾರ ನೆನಪುಗಳು ಹಾಗೂ ಕಲಿಕೆಯೊಂದಿಗೆ ಭೂಮಿಯತ್ತ ಮರು ಪಯಣ ಆರಂಭಿಸುತ್ತಿದ್ದೇನೆ. ಇವುಗಳನ್ನು ನನ್ನ ದೇಶವಾಸಿಗಳೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿರುವೆ’ ಎಂದು ಶುಕ್ಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.