ADVERTISEMENT

ಗಡಿ ರಾಜ್ಯಗಳಲ್ಲಿ ಬ್ಲಾಕ್‌ ಔಟ್‌: ಆತಂಕದಲ್ಲೇ ರಾತ್ರಿ ಕಳೆದ ಜನತೆ

ಪಿಟಿಐ
Published 9 ಮೇ 2025, 4:19 IST
Last Updated 9 ಮೇ 2025, 4:19 IST
<div class="paragraphs"><p>ಜಮ್ಮುವಿನಲ್ಲಿ ಬ್ಲಾಕ್‌ ಔಟ್‌</p></div>

ಜಮ್ಮುವಿನಲ್ಲಿ ಬ್ಲಾಕ್‌ ಔಟ್‌

   

ರಾಯಿಟರ್ಸ್‌ ಚಿತ್ರ

ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನತೆ ಹಚ್ಚಾಗಿದ್ದು, ಗಡಿ ರಾಜ್ಯಗಳಲ್ಲಿ ಗುರುವಾರ ರಾತ್ರಿ ಬ್ಲಾಕ್‌ ಔಟ್‌ ಘೋಷಿಸಲಾಗಿತ್ತು. 

ADVERTISEMENT

ಪಂಜಾಬ್‌ನ ಅಮೃತಸರ, ಪಠಾಣ್‌ಕೋಟ್‌. ಫಿರೋಜಾಪುರ್ ಜಿಲ್ಲೆಗಳ ಜನರು ಆತಂಕದಲ್ಲೇ ರಾತ್ರಿ ಕಳೆದಿದ್ದಾರೆ.

ಜಲಂಧರ್‌, ಗುರುದಾಸ್‌ಪುರ, ಹೋಶಿಯಾಪುರ ಜಿಲ್ಲೆಗಳಲ್ಲೂ ಬ್ಲಾಕ್‌ಔಟ್‌ ಘೋಷಿಸಲಾಗಿದೆ. ಪಂಜಾಬ್‌ ಮತ್ತು ಹರಿಯಾಣದ ರಾಜಧಾನಿ ಚಂಡೀಗಢದಲ್ಲಿ ಅಧಿಕಾರಿಗಳು ರಾತ್ರಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರು.

ಪಾಕಿಸ್ತಾನ ಸೇನೆ ಜಮ್ಮು, ಪಠಾಣ್‌ಕೋಟ್‌ ಮತ್ತು ಉದಮ್ ಪುರದಲ್ಲಿ ಡ್ರೋನ್, ಕ್ಷಿಪಣಿ ದಾಳಿ ಯತ್ನ ನಡೆಸಿದೆ. ಹೀಗಾಗಿ ಗಡಿ ರಾಜ್ಯಗಳಲ್ಲಿ ಬ್ಲಾಕ್‌ ಔಟ್‌ ಘೋಷಣೆ ಮಾಡಲಾಗಿದೆ.

ಸೇನಾ ಮೂಲಗಳ ಮಾಹಿತಿ ಪ್ರಕಾರ, ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್‌, ಅಮೃತಸರ, ಕಾಪುರ್ತಲಾ, ಜಲಂದರ್, ಲುಧಿಯಾನಾ, ಅದಮ್‌ಪುರ, ಚಂಡೀಗಢ, ಫಲೋಡಿ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಪಾಕಿಸ್ತಾನ ಮಿಲಿಟರಿ ದಾಳಿ ನಡೆಸಿದೆ.

ಬ್ಲಾಕ್‌ ಔಟ್‌ ಸಮಯದಲ್ಲಿ ಮನೆಯಿಂದ ಹೊರಬರಬೇಡಿ ಎಂದು ಅಧಿಕಾರಿಗಳು ಜನರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಪಂಜಾಬ್‌ನಲ್ಲಿ ಮೂರು ದಿನಗಳ ಕಾಲ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಬಂದ್‌ ಮಾಡುವಂತೆ ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.