ADVERTISEMENT

India-Pakistan Tensions: ಪಾಕ್ ಶೆಲ್ ದಾಳಿಯಲ್ಲಿ BSFನ 8 ಯೋಧರಿಗೆ ಗಾಯ

ಪಿಟಿಐ
Published 10 ಮೇ 2025, 10:31 IST
Last Updated 10 ಮೇ 2025, 10:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ನವದೆಹಲಿ / ಜಮ್ಮು: ಜಮ್ಮುವಿನ ಅಂತರರಾ‌ಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಶನಿವಾರ ನಡೆಸಿದ ಶೆಲ್ ದಾಳಿಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) 8 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಆರ್‌.ಎಸ್‌. ಪುರ ವಲಯದಲ್ಲಿ ಘಟನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸಮೀಪದ ವೈದ್ಯಕೀಯ ಸೌಲಭ್ಯಕ್ಕೆ ಸಾಗಿಸಲಾಗಿದೆ.

ಭಾರತ–ಪಾಕಿಸ್ತಾನದ 2 ಸಾವಿರ ಕಿ.ಮೀ. ಉದ್ದದ ಅಂತರರಾಷ್ಟ್ರೀಯ ಗಡಿಯನ್ನು ಕಾವಲು ಕಾಯುವ ಜವಾಬ್ದಾರಿ ಬಿಎಸ್‌ಎಫ್‌ನದ್ದು.

ಗಡಿಯಲ್ಲಿ ಪಾಕ್ ನೆಲೆಗಳ ಧ್ವಂಸ

ಮೇ 8 ಹಾಗೂ 9ರ ನಡುವಿನ ರಾತ್ರಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಮೇಲೆ ಡ್ರೋನ್ ದಾಳಿ ನಡೆಸುವ ಪಾಕಿಸ್ತಾನದ ದುಸ್ಸಾಹಸವನ್ನು ಭಾರತೀಯ ಸೇನೆ ಹೇಗೆ ಸಮರ್ಥವಾಗಿ ಹಿಮ್ಮೆಟ್ಟಿಸಿದೆ.

ಗಡಿ ನಿಯಂತ್ರಣ ರೇಖೆಯ ಸಮೀಪ ಇರುವ ಈ ಲಾಂಚ್‌ಪ್ಯಾಡ್‌ಗಳ ಮೂಲಕವೇ ಪಾಕಿಸ್ತಾನಿ ಉಗ್ರಗಾಮಿಗಳು ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿಯನ್ನು ಯೋಜಿಸುತ್ತಿದ್ದರು. ಈಗ ಭಾರತ ಸೇನೆಯ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಉಗ್ರಗಾಮಿಗಳ ಮೂಲಸೌಕರ್ಯದ ವ್ಯವಸ್ಥೆಗೆ ಬಲವಾದ ಹೊಡೆತ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.