ADVERTISEMENT

ಲಿಂಗ ಸಮಾನತೆ: 135ನೇ ಸ್ಥಾನಕ್ಕೇರಿದ ಭಾರತ

ಜಾಗತಿಕ ಆರ್ಥಿಕ ವೇದಿಕೆಯ ವರದಿ ಬಿಡುಗಡೆ

ಪಿಟಿಐ
Published 14 ಜುಲೈ 2022, 4:10 IST
Last Updated 14 ಜುಲೈ 2022, 4:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಿಂಗ ಸಮಾನತೆ ಶ್ರೇಯಾಂಕದಲ್ಲಿ ಕಳೆದ ವರ್ಷ 140ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 135ನೇ ಸ್ಥಾನಕ್ಕೇರಿದೆ. ಆರ್ಥಿಕ ಕ್ಷೇತ್ರ ದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದರಿಂದ ಶ್ರೇಯಾಂಕ ಏರಿಕೆಯಾಗಿದೆ.

ಜಾಗತಿಕ ಆರ್ಥಿಕ ವೇದಿಕೆಯು (ಡಬ್ಲ್ಯುಇಎಫ್‌) ಲಿಂಗ ಸಮಾನತೆ ಕುರಿತ ವರದಿಯನ್ನು ಜಿನಿವಾದಲ್ಲಿ ಬುಧವಾರ ಬಿಡುಗಡೆ ಮಾಡಿದೆ.

ಯಾಂಕ ಪಟ್ಟಿಯಲ್ಲಿ ಒಟ್ಟು 146 ದೇಶಗಳಿವೆ. ಐಸ್‌ಲ್ಯಾಂಡ್‌ ಅಗ್ರಸ್ಥಾನ ಕಾಯ್ದುಕೊಂಡಿದೆ. ನಂತರದ ಸ್ಥಾನದಲ್ಲಿ ಫಿನ್ಲೆಂಡ್‌, ನಾರ್ವೆ, ನ್ಯೂಜಿಲೆಂಡ್‌ ಮತ್ತು ಸ್ವೀಡನ್‌ ಇವೆ. ಅಫ್ಗಾನಿಸ್ತಾನ, ಪಾಕಿಸ್ತಾನ, ಕಾಂಗೊ, ಇರಾನ್‌, ಛಾಡ್‌ ದೇಶಗಳು ಕೊನೆಯ 5 ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT