ADVERTISEMENT

Covid-19 India Update: ದೇಶದಲ್ಲಿ 24 ಗಂಟೆಗಳಲ್ಲಿ 2.97 ಲಕ್ಷ ಮಂದಿ ಗುಣಮುಖ

ಏಜೆನ್ಸೀಸ್
Published 30 ಏಪ್ರಿಲ್ 2021, 4:23 IST
Last Updated 30 ಏಪ್ರಿಲ್ 2021, 4:23 IST
ಘಾಜಿಯಾಬಾದ್‌ನ ಇಂದಿರಾಪುರಂನಲ್ಲಿ ಕೋವಿಡ್‌–19 ರೋಗಿಯೊಬ್ಬರು ಆಮ್ಲಜನಕದ ಕೊರತೆ ಎದುರಾಗಿ ಸಾವಿಗೀಡಾಗಿರುವುದು. ಮೃತ ವ್ಯಕ್ತಿಯ ಪತ್ನಿ ಶವದ ಎದುರು ಕುಳಿತಿರುವುದು– ಪಿಟಿಐ ಚಿತ್ರ
ಘಾಜಿಯಾಬಾದ್‌ನ ಇಂದಿರಾಪುರಂನಲ್ಲಿ ಕೋವಿಡ್‌–19 ರೋಗಿಯೊಬ್ಬರು ಆಮ್ಲಜನಕದ ಕೊರತೆ ಎದುರಾಗಿ ಸಾವಿಗೀಡಾಗಿರುವುದು. ಮೃತ ವ್ಯಕ್ತಿಯ ಪತ್ನಿ ಶವದ ಎದುರು ಕುಳಿತಿರುವುದು– ಪಿಟಿಐ ಚಿತ್ರ   

ನವದೆಹಲಿ: ದೇಶದಲ್ಲಿ ಶುಕ್ರವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್‌–19 ದೃಢಪಟ್ಟ 3,86,452 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಸೋಂಕಿನಿಂದ 3,498 ಮಂದಿ ಸಾವಿಗೀಡಾಗಿದ್ದಾರೆ.

ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 31,70,228ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ ಸೋಂಕಿನಿಂದ 2,97,540 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ.

ದೇಶದಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 1,87,62,976 ಆಗಿದ್ದು, 1,53,84,418 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ಸೋಂಕಿನಿಂದ 2,08,330 ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ದೇಶದಲ್ಲಿ 15,22,45,179 ಡೋಸ್‌ಗಳಷ್ಟು ಲಸಿಕೆ ಹಾಕಲಾಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 2020ರ ಸೆಪ್ಟೆಂಬರ್‌ 16ರಂದು 50 ಲಕ್ಷ ದಾಟಿತು. ಡಿಸೆಂಬರ್‌ 19ರಂದು ಪ್ರಕರಣಗಳು 1 ಕೋಟಿ ಮುಟ್ಟಿತು. 2021ರ ಏಪ್ರಿಲ್‌ 19ರಂದು ಪ್ರಕರಣಗಳ ಸಂಖ್ಯೆ 1.50 ಕೋಟಿ ದಾಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.