ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ59,118 ಪ್ರಕರಣಗಳು ದೃಢಪಟ್ಟಿವೆ. ಇದೇ ವೇಳೆ 257 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಸದ್ಯ4,21,066 ಪ್ರಕರಣಗಳು ಸಕ್ರಿಯವಾಗಿದ್ದು, ಇವೂ ಸೇರಿದಂತೆ ಒಟ್ಟುಪ್ರಕರಣಗಳ ಸಂಖ್ಯೆ1,18,46,652ಕ್ಕೆ ಏರಿಕೆಯಾಗಿದೆ.ಸಾವಿನ ಸಂಖ್ಯೆ1,60,94ಗೆ ತಲುಪಿದೆ.ಗುರುವಾರ ಚೇತರಿಸಿಕೊಂಡ32,987 ಪ್ರಕರಣಗಳೂ ಸೇರಿದಂತೆ ಈವರೆಗೆ ಒಟ್ಟು 1,12,64,637ಸೋಂಕಿತರು ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ಸಚಿವಾಲಯ ತಿಳಿಸಿದೆ. ಒಟ್ಟು ಹೊಸ ಪ್ರಕರಣಗಳ ಶೇ. 81.63 ರಷ್ಟು ಈ7 ರಾಜ್ಯಗಳಲ್ಲೇ ವರದಿಯಾಗಿವೆ.
ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ2,64,001 ಸಕ್ರಿಯ ಪ್ರಕರಣಗಳು ಇವೆ. ಕೇರಳದಲ್ಲಿ 24,690,ಪಂಜಾಬ್‌ನಲ್ಲಿ 21,405, ಕರ್ನಾಟಕದಲ್ಲಿ 18,226, ಗುಜರಾತ್‌ನಲ್ಲಿ 9,372, ತಮಿಳುನಾಡಿನಲ್ಲಿ 10,487 ಮತ್ತು ಮಧ್ಯಪ್ರದೇಶದಲ್ಲಿ11,004 ಪ್ರಕರಣಗಳು ಸಕ್ರಿಯವಾಗಿವೆ.
ಐಸಿಎಂಆರ್ ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ23,86,04,638 ಜನರಿಗೆಮಾರ್ಚ್ 25ರ ವರೆಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಗುರುವಾರ ಒಂದೇದಿನ11,00,756 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಇದುವರೆಗೆ ಒಟ್ಟು 5,55,04,440 ಡೋಸ್‌ಗಳಷ್ಟು ಕೋವಿಡ್-19ಲಸಿಕೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.