ADVERTISEMENT

ಸ್ವದೇಶಿ ನಿರ್ಮಿತ 'ಪ್ರಳಯ್' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಪಿಟಿಐ
Published 22 ಡಿಸೆಂಬರ್ 2021, 9:31 IST
Last Updated 22 ಡಿಸೆಂಬರ್ 2021, 9:31 IST
ಚಿತ್ರ ಕೃಪೆ: ಡಿಆರ್‌ಡಿಒ
ಚಿತ್ರ ಕೃಪೆ: ಡಿಆರ್‌ಡಿಒ   

ಬಾಲಾಸೋರ್ (ಒಡಿಶಾ): ಸ್ವದೇಶಿ ನಿರ್ಮಿತ ಸೀಮಿತ ದೂರ ತಲುಪಬಲ್ಲ ನೆಲದಿಂದ ನೆಲಕ್ಕೆ ಚಿಮ್ಮುವ 'ಪ್ರಳಯ್' ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಬುಧವಾರ ಯಶಸ್ವಿಯಾಗಿ ನಡೆಸಿತು.

ಒಡಿಶಾದ ಕರಾವಳಿ ದ್ವೀಪದಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪ ಪ್ರದೇಶದಿಂದ ಬೆಳಿಗ್ಗೆ 10.30ರ ವೇಳೆಗೆ ಪರೀಕ್ಷಾರ್ಥ ಪ್ರಯೋಗ ನಡೆಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ತಿಳಿಸಿದೆ.

500ರಿಂದ 1000 ಕೆ.ಜಿ. ತೂಕದ ಸಿಡಿತಲೆ ಹೊತ್ತು ಸಾಗುವ ಸಾಮರ್ಥ್ಯದ ಪ್ರಳಯ್ ಕ್ಷಿಪಣಿ, 350ರಿಂದ 500 ಕಿ.ಮೀ. ವರೆಗಿನ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.