ADVERTISEMENT

ಭಾರತ ಸದ್ಯದಲ್ಲೇ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಆರ್‌ಬಿಐ ಗವರ್ನರ್

ಪಿಟಿಐ
Published 30 ಆಗಸ್ಟ್ 2025, 13:04 IST
Last Updated 30 ಆಗಸ್ಟ್ 2025, 13:04 IST
   

ಇಂದೋರ್‌: ಜಗತ್ತಿನ ಅತಿದೊಡ್ಡ ಆರ್ಥಿಕತೆ ಹೊಂದಿರುವ ಐದು ದೇಶಗಳ ಸಾಲಿನಲ್ಲಿ ಭಾರತವಿದ್ದು, ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಲಿದೆ ಎಂದು ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅವರು ಶನಿವಾರ ಹೇಳಿದ್ದಾರೆ.

ಇಂದೋರ್‌ನಲ್ಲಿ ಸರ್ಕಾರಿ ಬ್ಯಾಂಕ್‌ಗಳ ಆರ್ಥಿಕ ಸೇರ್ಪಡೆ ಅಭಿಯಾನ ‘ಸಂತೃಪ್ತಿ ಶಿವರ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಸಹಯೋಗದಲ್ಲಿ 11 ವರ್ಷಗಳ ಹಿಂದೆ ಜನ ಧನ ಯೋಜನೆಯನ್ನು ಆರಂಭಿಸಲಾಗಿತ್ತು. ಭಾರತದಲ್ಲಿ 55 ಕೋಟಿ ಜನ ಧನ ಖಾತೆಗಳಿವೆ. ಈ ಯೋಜನೆಯು ದೇಶದ ಎಲ್ಲಾ ವರ್ಗದ ಜನರನ್ನು ಒಳಗೊಂಡಿದೆ. ಉಳಿತಾಯ, ಪಿಂಚಣಿ, ಸಾಲ ಹಾಗೂ ವಿಮೆಯನ್ನು ನೀಡುವ ಮೂಲಕ ಅವರ ಆರ್ಥಿಕ ಅಭಿವೃದ್ದಿಗೆ ಕಾರಣವಾಗಿದೆ ಎಂದಿದ್ದಾರೆ.

ADVERTISEMENT

ಜನ ಧನ ಯೋಜನೆಯು ದೇಶದ ಆರ್ಥಿಕ ಅಭಿವೃದ್ದಿಗೆ ಸಹಾಯಮಾಡಿದೆ ಎಂದು ಹೇಳಿದ್ದಾರೆ.

ಅಮೆರಿಕದ ಹೆಚ್ಚಿನ ಸುಂಕದ ನಡುವೆಯೂ, ಆರ್ಥಿಕ ವರ್ಷದ ಏಪ್ರಿಲ್–ಜೂನ್‌ ತಿಂಗಳಲ್ಲಿ ದೇಶದ ಜಿಡಿಪಿಯು ಶೇ 7.8 ರಷ್ಟು ಬೆಳವಣಿಗೆ ಹೊಂದಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್‌ಬಿಐ ಮುಖ್ಯಸ್ಥ ಸಿ.ಎಸ್‌. ಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.