ADVERTISEMENT

ಭಾರತದಲ್ಲಿ ಬೇಡಿಕೆ ತಗ್ಗುವವರೆಗೆ ಕೋವಿಡ್-19 ಲಸಿಕೆ ರಫ್ತು ಇಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2021, 15:20 IST
Last Updated 19 ಜೂನ್ 2021, 15:20 IST
   

ನವದೆಹಲಿ: ದೇಶದಲ್ಲಿ ಗಮನಾರ್ಹ ಪ್ರಮಾಣದ ಜನಸಂಖ್ಯೆಗೆ ಲಸಿಕೆ ನೀಡುವವರೆಗೆ ವಿದೇಶಗಳಿಗೆ ಲಸಿಕೆ ರಫ್ತು ಮಾಡುವುದನ್ನು ತಡೆಯ ಹಿಡಿಯಲಾಗಿದೆ ಎಂದು ಕೋವಿಡ್ -19 ಕಾರ್ಯಪಡೆಯ ಮುಖ್ಯಸ್ಥ ಎಂದು ವಿನೋದ್ ಕೆ. ಪಾಲ್ ತಿಳಿಸಿದ್ದಾರೆ.

ಲಸಿಕೆ ರಫ್ತು ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವಲ್ಲಿ ನಿಖರವಾದ ಸಮಯದ ಚೌಕಟ್ಟು ಇಲ್ಲ ಎಂದು ವಿನೋದ್ ಕೆ. ಪಾಲ್ ಅವರೊಂದಿಗಿನ ಸಂದರ್ಶನವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ‘ಎಎಫ್‌ಪಿ’ ವರದಿ ಮಾಡಿದೆ.

ಕೋವಿಡ್‌ ಎರಡನೇ ಅಲೆ ದೇಶಕ್ಕೆ ಪ್ರಬಲ ಹೊಡೆತ ನೀಡಿದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಏಪ್ರಿಲ್‌ನಲ್ಲಿ ಕೋವಿಡ್ ಲಸಿಕೆ ರಫ್ತು ನಿಷೇಧಿಸಿತು. ಈ ವರ್ಷದ ಅಂತ್ಯದವರೆಗೆ ಲಸಿಕೆಯನ್ನು ತಲುಪಿಸಲು ಸಾಧ್ಯವಾಗುವುದಿಲ್ಲ ಎಂದು ವಿಶ್ವದ ಅತಿದೊಡ್ಡ ಲಸಿಕೆ ಸರಬರಾಜುದಾರ ಸಂಸ್ಥೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇತ್ತೀಚೆಗೆ ಹೇಳಿತ್ತು.

ADVERTISEMENT

ದೇಶದಲ್ಲಿ ಒಟ್ಟು 2.98 ಕೋಟಿ ಜನರಿಗೆ ಕೋವಿಡ್‌ ಬಂದಿದೆ. 3.80 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಆದರೆ, ಅಧಿಕೃತ ಸಂಖ್ಯೆಗಿಂತಲೂ ವಾಸ್ತವದ ಸಂಖ್ಯೆ ಅಧಿಕವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.