ನವದೆಹಲಿ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶ ಬಳಸದಂತೆ ಭಾರತವು ಬುಧವಾರ ನಿರ್ಬಂಧ ಹೇರಿದೆ.
‘ನಿರ್ಬಂಧ ಹೇರಿದ ಕುರಿತು ಪಾಕಿಸ್ತಾನಕ್ಕೆ ಅಧಿಕೃತವಾಗಿ ತಿಳಿ ಸಲಾಗಿದೆ’ ಎಂದು ಮೂಲಗಳು ತಿಳಿಸಿವೆ. ವಾರದ ಹಿಂದೆ, ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶ ಬಳಸದಂತೆ ಪಾಕಿಸ್ತಾನವು ನಿರ್ಬಂಧ ಹೇರಿತ್ತು.
ಗಿಲ್ಗಿಟ್, ಸ್ಕರ್ದುಗೆ ವಿಮಾನ ಸಂಚಾರ ರದ್ದು:
ಇಸ್ಲಾಮಾಬಾದ್: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಪಾಕಿಸ್ತಾನ ಇಂಟರ್‌ನ್ಯಾಷನಲ್
ಏರ್‌ಲೈನ್ಸ್ (ಪಿಎಐ), ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಮತ್ತು ಸ್ಕರ್ದು ಸೇರಿದಂತೆ ಉತ್ತರ ಭಾಗದ ಕೆಲವು ಪ್ರದೇಶಗಳಿಗೆ ತನ್ನ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ.
ಭಾರತದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭದ್ರತೆಯ ಕಾರಣಗಳಿಂದಾಗಿ ಪಿಎಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕರಾಚಿ–ಸ್ಕರ್ದು ಮತ್ತು ಲಾಹೋರ್– ಸ್ಕರ್ದು ನಡುವೆ ಸಂಚರಿಸುವ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಜಂಗ್ ದಿನಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.