ADVERTISEMENT

ಭಾರತೀಯ ಸಶಸ್ತ್ರ ಪಡೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ

ಕಲ್ಯಾಣ್‌ ರೇ
Published 10 ಜುಲೈ 2022, 5:08 IST
Last Updated 10 ಜುಲೈ 2022, 5:08 IST
ಭಾರತೀಯ ಸೇನೆ
ಭಾರತೀಯ ಸೇನೆ   

ನವದೆಹಲಿ: ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, ಕೋಸ್ಟ್ ಗಾರ್ಡ್‌ಗಳು ಬಳಕೆ ಮಾಡಲಿರುವ 10 ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಆಧಾರಿತ ಮೊದಲ ಹಂತದ ಉತ್ಪನ್ನಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಅನಾವರಣಗೊಳಿಸಲಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಅಂತಹ 75 ಎಐ ತಂತ್ರಜ್ಞಾನಗಳನ್ನು ಪರಿಚಯಿಸುವ ಗುರಿ ಹೊಂದಲಾಗಿದೆ.

ಇದರೊಂದಿಗೆ ಭಾರತೀಯ ಸಶಸ್ತ್ರ ಪಡೆಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ದೊಡ್ಡ ಮಟ್ಟದಲ್ಲಿ ಬಳಕೆ ಮಾಡಲು ಸಜ್ಜಾಗಿವೆ.

10 ಎಐ ತಂತ್ರಜ್ಞಾನಗಳ ಪೈಕಿ ಕನಿಷ್ಠ ನಾಲ್ಕನ್ನು ಸೇನೆಯು ಬಳಕೆ ಮಾಡಲಿದೆ. ಇದು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಎಐ ಗೆಸ್ಟರ್ ರೆಕಾಗ್ನಿಷನ್ ಸಿಸ್ಟಂ ಒಳಗೊಂಡಿದೆ.

ಈ ತಂತ್ರಜ್ಞಾನವು ವ್ಯಕ್ತಿಯೊಬ್ಬನ ಚಲನವಲನ, ಬಂದೂಕನ್ನು ಹೊಂದಿದ್ದಾನೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲಿದೆ. ಅಲ್ಲದೆ ಐಪಿ ಹೊಂದಿದ ಕ್ಯಾಮರಾ ನೆಟ್‌ವರ್ಕ್‌ನಲ್ಲಿ ಸುಲಭವಾಗಿ ಸಂಯೋಜಿಸಬಹುದಾಗಿದೆ.

ಕಣ್ಗಾವಲು ವ್ಯವಸ್ಥೆ, ರೋಬೋಟಿಕ್ಸ್ ವ್ಯವಸ್ಥೆ, ಸೈಬರ್ ಸೆಕ್ಯೂರಿಟಿ, ವಾಯ್ಸ್ ಕಮಾಂಡ್, ಡೇಟಾ ಅನಾಲಿಟಿಕ್ಸ್, ಟಾರ್ಗೆಟ್ ಟ್ರ್ಯಾಕಿಂಗ್, ಕಾವಲುಪಡೆ ಮುನ್ಸೂಚನೆ ನಿರ್ವಹಣೆ ಸೇರಿದಂತೆ ಹಲವುಎಐತಂತ್ರಜ್ಞಾನಗಳನ್ನುಒಳಗೊಂಡಿರಲಿದೆ.

75 ಎಐ ತಂತ್ರಜ್ಞಾನ ಉತ್ಪನ್ನಗಳನ್ನು ಪರಿಚಯಿಸಲಿದ್ದು, ಇನ್ನು 100ರಷ್ಟು ಅಂತಹ ಉತ್ಪನ್ನಗಳು ಅಭಿವೃದ್ಧಿ ಹಂತದಲ್ಲಿವೆ ಎಂದು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.