ADVERTISEMENT

ಸೈನಿಕರೊಂದಿಗೆ ಪುಷ್‌ಅಪ್ ಮಾಡಿದ ಭಾರತೀಯ ಸೇನಾ ಮುಖ್ಯಸ್ಥ: ಹರಿದಾಡುತ್ತಿದೆ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2025, 11:07 IST
Last Updated 14 ಡಿಸೆಂಬರ್ 2025, 11:07 IST
   

ಡೆಹರಾಡೂನ್: ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಸೈನಿಕರೊಂದಿಗೆ ಪುಷ್‌ಅಪ್ ಮಾಡುತ್ತಿರುವ ವಿಡಿಯೊ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಡಿ.13ರಂದು ಭಾರತೀಯ ಮಿಲಿಟರಿ ಅಕಾಡೆಮಿ(ಐಎಂಎ) ಡೆಹರಾಡೂನ್‌ನಲ್ಲಿ ತರಬೇತಿ ಮುಗಿಸಿದ 491 ಕೆಡೆಟ್‌ಗಳು ಭಾರತೀಯ ಸೇನೆಗೆ ಸೇರಿದರು. ಈ ವೇಳೆ ನಡೆದ ಪೆರೇಡ್‌ ನಂತರ ಸೇನಾ ಮುಖ್ಯಸ್ಥರು‌ ಅವರೊಂದಿಗೆ ಪುಷ್‌ಅಪ್‌ ಮಾಡಿದ್ದು, ವಿಡಿಯೊಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೇನಾ ಮುಖ್ಯಸ್ಥರು ಪಿಟ್‌ನೆಸ್‌ ಕಾಪಾಡಿಕೊಳ್ಳುವ ಮೂಲಕ ತಮ್ಮ ಮುಂದಿನ ತಲೆಮಾರಿನ ಸೇನಾಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ ದ್ವಿವೇದಿ ‘ಭಾರತೀಯ ಸೇನೆಯ ಗೌರವವನ್ನು ಎತ್ತಿಹಿಡಿಯಿರಿ. ರಾಷ್ಟ್ರಕ್ಕೆ ನಿಷ್ಠೆ, ಬದ್ಧತೆ ಮತ್ತು ಗೌರವದಿಂದ ಸೇವೆ ಸಲ್ಲಿಸಿ’ ಎಂದು ಕಿವಿಮಾತು ಹೇಳಿದ್ದಾರೆ.

ಈ ವೇಳೆ ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ, ನೂತನ ಅಧಿಕಾರಿಗಳ ಮೇಲೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಠಿ ಸುರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.