ADVERTISEMENT

ಅಗ್ನಿವೀರರಿಗೆ ಸಿಕ್ಕಿಂ ಪೊಲೀಸ್‌ ಇಲಾಖೆಯಲ್ಲಿ ಶೇ 20ರಷ್ಟು ಮೀಸಲಾತಿ: CM ಘೋಷಣೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 14:43 IST
Last Updated 24 ಏಪ್ರಿಲ್ 2025, 14:43 IST
<div class="paragraphs"><p>ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಂಡ ಅಗ್ನಿವೀರರು</p></div>

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಂಡ ಅಗ್ನಿವೀರರು

   

ರಾಯಿಟರ್ಸ್ ಚಿತ್ರ

ಗ್ಯಾಂಗ್ಟಾಕ್‌: ಅಗ್ನಿವೀರರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶೇ 20ರಷ್ಟು ಮೀಸಲಾತಿ ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಗುರುವಾರ ಹೇಳಿದ್ದಾರೆ.

ADVERTISEMENT

ವಿಕಸಿತ್ ಭಾರತ್ 2047 – ಸೇನೆ ನಾಗರಿಕ ಸಮ್ಮಿಲನ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಘೋಷಣೆ ಮಾಡಿದರು.

‘ಸೇನೆಯಿಂದ ನಿವೃತ್ತರಾದವರು ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈವರೆಗೂ ಇದ್ದ ಗರಿಷ್ಠ ವಯೋಮಿತಿಯನ್ನು 10 ವರ್ಷಗಳಷ್ಟು ಸಡಿಲಿಸಲಾಗಿದೆ. ಮಾಜಿ ಯೋಧರು ಈಗ ಅವರ 50ರ ವಯೋಮಾನದವರೆಗೂ ಅರ್ಜಿ ಸಲ್ಲಿಸಲು ಅರ್ಹರು’ ಎಂದಿದ್ದಾರೆ.

‘ಗಡಿಯನ್ನು ರಕ್ಷಿಸುವಲ್ಲಿ ಸೈನಿಕರ ಪಾತ್ರ ಮಹತ್ವದ್ದು. ಅದರಲ್ಲೂ ಸಾಮಾಜಿಕ ಮತ್ತು ಆರ್ಥಿಕವಾಗಿ ರಾಜ್ಯವನ್ನು ಬಲಿಷ್ಠವಾಗಿಸುವಲ್ಲೂ ಇವರ ಯೋಗದಾನವಿದೆ. 2023ರಲ್ಲಿ ಸಂಭವಿಸಿದ ತೀಸ್ತಾ ನದಿ ಪ್ರವಾಹ ಪರಿಸ್ಥಿತಿಯನ್ನು ಸೈನಿಕರು ಉತ್ತಮವಾಗಿ ನಿರ್ವಹಿಸಿ ನಾಗರಿಕರ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಿದರು’ ಎಂದು ತಮಾಂಗ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.