ADVERTISEMENT

ಸಿಕ್ಕಿಂನಲ್ಲಿ ಭೂಕುಸಿತ; 500 ಪ್ರವಾಸಿಗರ ರಕ್ಷಣೆ

ಪಿಟಿಐ
Published 20 ಮೇ 2023, 14:12 IST
Last Updated 20 ಮೇ 2023, 14:12 IST
   

ಗ್ಯಾಂಗ್ಟಕ್‌ : ಭಾರಿ ಮಳೆಯಿಂದಾಗಿ ಸಿಕ್ಕಿಂನಲ್ಲಿ ಭೂಕುಸಿತ ಮತ್ತು ರಸ್ತೆ ತಡೆಯುಂಟಾಗಿದ್ದು, ಅತಂತ್ರರಾಗಿದ್ದ ಸುಮಾರು 500 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ಲಚೆನ್‌, ಲಚುಂಗ್‌ ಮತ್ತು ಚುಂಗ್‌ಥಂಗ್‌ನಲ್ಲಿ ಭಾರಿ ಮಳೆಯಾಗಿತ್ತು. ಪರಿಣಾಮ ಮಾರ್ಗಮಧ್ಯೆ ಸಿಲುಕಿದ್ದ 500 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅತಂತ್ರರಾದವರ ಪೈಕಿ 216 ಪುರುಷರು, 113 ಮಹಿಳೆಯರು ಮತ್ತು 54 ಮಕ್ಕಳಿದ್ದಾರೆ. ಅವರನ್ನು ಮೂರು ಸೇನಾ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಸೇನಾಪಡೆ ತತ್‌ಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಕಾರಣ ಯಾವುದೇ ದುರಂತ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.