ADVERTISEMENT

ಭಾರತ–ಬ್ರಿಟನ್‌ ವ್ಯಾಪಾರ ಒಪ್ಪಂದ ಕುರಿತ ವರದಿ ಅಲ್ಲಗಳೆದ ಭಾರತ

ಪಿಟಿಐ
Published 10 ಏಪ್ರಿಲ್ 2023, 16:25 IST
Last Updated 10 ಏಪ್ರಿಲ್ 2023, 16:25 IST
.
.   

ಲಂಡನ್‌/ನವದೆಹಲಿ (ಪಿಟಿಐ): ಖಾಲಿಸ್ತಾನ ಪರ ಗುಂಪುಗಳು ಲಂಡನ್‌ನಲ್ಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತ–ಬ್ರಿಟನ್‌ ವ್ಯಾಪಾರ ಒಪ್ಪಂದದ ಮಾತುಕತೆಯು ಮುರಿದುಬಿದ್ದಿದೆ ಎಂಬ ವರದಿಗಳನ್ನು ಭಾರತದ ಅಧಿಕಾರಿಗಳು ಸೋಮವಾರ ಅಲ್ಲಗಳೆದಿದ್ದಾರೆ.

ಭಾರತದ ಹೈಕಮಿಷನ್‌ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬ್ರಿಟನ್‌ನೊಂದಿಗಿನ ವ್ಯಾಪಾರ ಒಪ್ಪಂದದಿಂದ ಭಾರತ ಹಿಂದೆ ಸರಿದಿದೆ ಎಂದು ಬ್ರಿಟನ್‌ ಮಾಧ್ಯಮಗಳು ವರದಿ ಮಾಡಿದ್ದವು.

‘ಈ ವರದಿಗಳು ಆಧಾರರಹಿತ’ ಎಂದು ಭಾರತ ಸರ್ಕಾರ ಮೂಲಗಳು ತಿಳಿಸಿವೆ.

ADVERTISEMENT

ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಂಬಂಧಿಸಿದ ಮುಂದಿನ ಸುತ್ತಿನ ಮಾತುಕತೆಯು ಲಂಡನ್‌ನಲ್ಲಿ ಏ.24ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.