
ನವದೆಹಲಿ: ಗೋವಾದಿಂದ ಮಾಲ್ಟಾ ದೇಶಕ್ಕೆ ತೆರಳುತ್ತಿದ್ದ ವ್ಯಾಪಾರ ಹಡಗಿನಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದ ಉಕ್ರೇನ್ ಪ್ರಜೆಗೆ ತುರ್ತು ಚಿಕಿತ್ಸೆ ಒದಗಿಸುವ ಮೂಲಕ ಭಾರತೀಯ ಕರಾವಳಿ ರಕ್ಷಣಾ ಪಡೆ ನೆರವಿನ ಹಸ್ತ ಚಾಚಿದೆ.
'ಗೋವಾದಿಂದ ಮಾಲ್ಟಾ ದೇಶಕ್ಕೆ ತೆರಳುತ್ತಿದ್ದ ವ್ಯಪಾರಿ ಹಡಗಿನಲ್ಲಿ (ಎಂವಿ ಇಂಟರ್ಯಾಸಿಯಾ ಆಂಪ್ಲಿಫೈ) ಹೃದಯಾಘಾತದಿಂದ ಬಳಲುತ್ತಿದ್ದ 62 ವರ್ಷದ ಉಕ್ರೇನ್ ಪ್ರಜೆಯನ್ನು ಮೆಡೆವಾಕ್ ಮೂಲಕ ಭಾರತೀಯ ಕರಾವಳಿ ರಕ್ಷಣಾ ಪಡೆ ವೈದ್ಯಕೀಯ ನೆರವು ಒದಗಿಸಿದೆ. ಇದು ಸಮುದ್ರದಲ್ಲಿ ಜೀವಗಳನ್ನು ರಕ್ಷಿಸುವ ನಮ್ಮ ದೃಢನಿಶ್ಚಯದ ಬದ್ಧತೆಯನ್ನು ತೋರಿಸುತ್ತದೆ’ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಭಾರತೀಯ ಕರಾವಳಿ ರಕ್ಷಣಾ ಪಡೆಯ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
‘ಭಾರತೀಯ ಕರಾವಳಿ ರಕ್ಷಣಾ ಪಡೆಯ ಅತ್ಯುತ್ತಮ ವೃತ್ತಿಪರತೆ ಮತ್ತು ತ್ವರಿತ ಕ್ರಮದಿಂದಾಗಿ ಹೃದಯಾಘಾತದಿಂದ ಬಳಲುತ್ತಿದ್ದ ಉಕ್ರೇನ್ ಪ್ರಜೆಗೆ ವೈದ್ಯಕೀಯ ನೆರವು ಒದಗಿಸಲಾಗಿದೆ. ಸಮುದ್ರ ಸುರಕ್ಷತೆ ಮತ್ತು ಮಾನವೀಯ ಸೇವೆಗೆ ಭಾರತೀಯ ಕರಾವಳಿ ರಕ್ಷಣಾ ಪಡೆಯ ಅಚಲ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಸಮುದ್ರದಲ್ಲಿ ಜೀವಗಳನ್ನು ಉಳಿಸುವುದು ಸಹಾನುಭೂತಿ, ಶ್ರೇಷ್ಠತೆಯ ಕಾರ್ಯವಾಗಿದೆ’ ಎಂದು ‘ಎಕ್ಸ್’ ಬಳಕೆದಾರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.