ADVERTISEMENT

ಎರಡು ಪ್ರಿಡೇಟರ್ ಡ್ರೋನ್‌ಗಳು ನೌಕಾಪಡೆಗೆ ನಿಯೋಜನೆ: ಚೀನಾ ಗಡಿಯಲ್ಲಿ ಕಣ್ಗಾವಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2020, 15:31 IST
Last Updated 25 ನವೆಂಬರ್ 2020, 15:31 IST
ಸಾಂದರ್ಭಿಕ ಚಿತ್ರ (ಕೃಪೆ: ಎಎಫ್‌ಪಿ)
ಸಾಂದರ್ಭಿಕ ಚಿತ್ರ (ಕೃಪೆ: ಎಎಫ್‌ಪಿ)   

ನವದೆಹಲಿ: ಅಮೆರಿಕದ ಸಂಸ್ಥೆಯಿಂದ ಲೀಸ್‌ಗೆ ಪಡೆಯಲಾಗಿರುವ ಎರಡು ಪ್ರಿಡೇಟರ್ ಡ್ರೋನ್‌ಗಳನ್ನು ಭಾರತೀಯ ನೌಕಾಪಡೆಗೆ ನಿಯೋಜನೆ ಮಾಡಲಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇವುಗಳನ್ನು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಣ್ಗಾವಲಿಗೆ ಬಳಸಲಾಗುವುದು. ಚೀನಾ ಜತೆಗಿನ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಕಣ್ಗಾವಲಿಗೂ ಇದನ್ನು ಬಳಸುವ ಸಾಧ್ಯತೆ ಇದೆ ಎಂದು ವರದಿ ಉಲ್ಲೇಖಿಸಿದೆ.

ಭಾರತ–ಚೀನಾ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯವು ನೀಡಿರುವ ತುರ್ತು ಖರೀದಿ ಅಧಿಕಾರ ಬಳಸಿಕೊಂಡು ಈ ಡ್ರೋನ್‌ಗಳನ್ನು ಖರೀದಿಸಲಾಗಿದೆ. ನವೆಂಬರ್‌ 2ನೇ ವಾರ ಈ ಡ್ರೋನ್‌ಗಳು ಭಾರತಕ್ಕೆ ಬಂದಿವೆ. ಇವುಗಳನ್ನು ನವೆಂಬರ್ 21ರಿಂದ ತಮಿಳುನಾಡಿನ ಅರಕೋಣಂ ನೌಕಾನೆಲೆಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡ್ರೋನ್‌ಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ. 30 ಗಂಟೆಗಳಿಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಬಲ್ಲ ಇವು ಸಾಗರ ಪಡೆಗಳಿಗೆ ದೊಡ್ಡ ಸ್ವತ್ತಾಗಲಿವೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.