ನಾನಾ ಪಟೋಲೆ
ನಾಗ್ಪುರ: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಲ್ಲಿ ಆದ ಸ್ಥಿತಿಯನ್ನು ಹೋಲಿಸಿದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು, ಭಾರತದಲ್ಲಿಯೂ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದರು.
ಈ ವಿಷಯ ಜಾಗತಿಕವಾಗಿಯೂ ಚರ್ಚೆಗೆ ಒಳಪಟ್ಟಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಲಾಪುರ ಜಿಲ್ಲೆಯ ಮರಕಡವಾಡಿ ನಿವಾಸಿಗಳು ಇವಿಎಂ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ ಮತ್ತು ಮತಪತ್ರ ಬಳಸಿ ಮರು ಚುನಾವಣೆ ನಡೆಸಲು ಬಯಸಿದ್ದಾರೆ. ಈ ಬಗ್ಗೆ ಬೃಹತ್ ಚಳವಳಿಯೇ ರೂಪುಗೊಂಡಿದೆ’ ಎಂದು ಹೇಳಿದರು.
ಮರು ಚುನಾವಣೆಗೆ ಯೋಜನೆ ರೂಪಿಸಿದ ಆರೋಪದ ಮೇಲೆ ಹಲವು ಗ್ರಾಮಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ಉಲ್ಲೇಖಿಸಿ, ಮರಕಡವಾಡಿ ಜನರ ಧ್ವನಿಯನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತ ಪ್ರಶ್ನೆಗೆ, ‘ಮಹಾವಿಕಾಸ್ ಆಘಾಡಿ ಮಿತ್ರಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಉದ್ಧವ್), ಎನ್‌ಸಿಪಿ(ಎಸ್‌ಪಿ) ಮಾತುಕತೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.