ಪ್ರಾತಿನಿಧಿಕ ಚಿತ್ರ
ಹೈದರಾಬಾದ್: ಭಾರತದ ಐಟಿ ಕ್ಷೇತ್ರವು ನಿತ್ರಾಣ ಎಂಬ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ. ಯಾವಾಗಲೂ ಆನ್‌ಲೈನ್‌ನಲ್ಲಿಯೇ ಇರಬೇಕು ಎಂದು ಕೋವಿಡ್ ಸಾಂಕ್ರಾಮಿಕದ ಬಳಿಕ ಎಲ್ಲ ಕಂಪನಿಗಳು ತಮ್ಮ ಉದ್ಯೋಗಿಗಳಿಂದ ನಿರೀಕ್ಷಿಸುತ್ತಿವೆ. ಕಾನೂನು ಹೇಳುವುದಕ್ಕಿಂತಲೂ ಹೆಚ್ಚಿನ ಕೆಲಸದ ಅವಧಿಯಲ್ಲಿ ಐಟಿ ಉದ್ಯೋಗಿಗಳು ದುಡಿಯುತ್ತಿದ್ದಾರೆ. ಇದು ಅವರಲ್ಲಿ ಒತ್ತಡವನ್ನು ಹೆಚ್ಚಿಸಿದೆ, ಅವರನ್ನು ನಿತ್ರಾಣಗೊಳಿಸಿದೆ. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹಾಗೂ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್.ಎನ್. ಸುಬ್ರಹ್ಮಣ್ಯಂ ಅವರನ್ನು ಬಹಿರಂಗವಾಗಿಯೇ ಟೆಕಿಗಳು ಬೈಯುತ್ತಿದ್ದಾರೆ. ‘ಬ್ಲೈಂಡ್’ ಎನ್ನುವ ಆ್ಯಪ್‌ವೊಂದು ‘ಕೆಲಸದ ಒತ್ತಡವನ್ನು ಅನುಭವಿಸುತ್ತಿದ್ದೀರಾ?’ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಈ ಸಮೀಕ್ಷೆ ನಡೆಸಿದೆ.
ಜಗತ್ತಿನಾದ್ಯಂತ ಇರುವ ವಿವಿಧ ಕಂಪನಿ ಉದ್ಯೋಗಿಗಳು ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಸಮಸ್ಯೆಗಳನ್ನು ಚರ್ಚಿಸಲು ಇರುವ ವೇದಿಕೆಯೇ ‘ಬ್ಲೈಂಡ್’ ಆ್ಯಪ್. ಮೆಟಾ, ಯೂಬರ್, ಪೇ ಪಾಲ್, ಕ್ಯಾಪಿಕಲ್ ಒನ್, ಮೈಕ್ರೊಸಾಫ್ಟ್ ಕಂಪನಿಗಳಲ್ಲಿ ಕೆಲಸ ಮಾಡುವ ಸುಮಾರು 1.2 ಕೋಟಿ ಉದ್ಯೋಗಿಗಳು ಈ ಆ್ಯಪ್‌ನಲ್ಲಿ ಕ್ರಿಯಾಶೀಲರಾಗಿದ್ದಾರೆ. ಮೈಕ್ರೊಸಾಫ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತದ ಶೇ 70ರಷ್ಟು ಉದ್ಯೋಗಿಗಳು ಈ ಆ್ಯಪ್‌ನಲ್ಲಿದ್ದಾರೆ. ಅಮೆರಿಕದಲ್ಲಿ ಈ ಆ್ಯಪ್‌ನ ಕೇಂದ್ರ ಕಚೇರಿ ಇದೆ. ಈ ವೇದಿಕೆಯಲ್ಲಿ ಮಾಹಿತಿ ಹಂಚಿಕೊಳ್ಳುವವರ ಗುರುತನ್ನು ಈ ಆ್ಯಪ್ ಬಹಿರಂಗಪಡಿಸುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.