ADVERTISEMENT

ಚಂದ್ರಯಾನ -3 ಯೋಜನೆಗೆ ಕೇಂದ್ರದ ಅನುಮತಿ ಲಭಿಸಿದೆ: ಇಸ್ರೊ ಮುಖ್ಯಸ್ಥ ಕೆ.ಶಿವನ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 7:18 IST
Last Updated 1 ಜನವರಿ 2020, 7:18 IST
ಬೆಂಗಳೂರಿನಲ್ಲಿ ಕೆ.ಶಿವನ್ ಸುದ್ದಿಗೋಷ್ಠಿ
ಬೆಂಗಳೂರಿನಲ್ಲಿ ಕೆ.ಶಿವನ್ ಸುದ್ದಿಗೋಷ್ಠಿ   

ಬೆಂಗಳೂರು: ಚಂದ್ರಯಾನ-3 ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಲಭಿಸಿದ್ದು, ಯೋಜನೆಯ ಕಾರ್ಯಗಳು ನಡೆಯುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಶಿವನ್ , ಬಾಹ್ಯಾಕಾಶ ನೌಕೆಗಳ ಉಡ್ಡಯಣ ಕೇಂದ್ರ ಸ್ಥಾಪಿಸಲು ಜಮೀನು ಖರೀದಿಸಿದ್ದು, ಈ ಕೇಂದ್ರ ತಮಿಳುನಾಡಿನ ತೂತ್ತುಕುಡಿಯಲ್ಲಿರಲಿದೆ ಎಂದಿದ್ದಾರೆ.

ಚಂದ್ರಯಾನ -2 ಲ್ಯಾಂಡಿಂಗ್ ವಿಫಲವಾದರೂ ನಾವು ಈ ಯೋಜನೆಯ ಮೂಲಕ ಉತ್ತಮ ಸಾಧನೆ ಮಾಡಿದ್ದೇವೆ. ಆರ್ಬಿಟರ್ ಈಗಲೂ ಕಾರ್ಯವೆಸಗುತ್ತಿದ್ದು, ಮುಂದಿನ 7 ವರ್ಷಗಳ ಕಾಲ ಇದು ನಮಗೆ ಮಾಹಿತಿಯನ್ನು ಒದಗಿಸಲಿದೆ.

2022ರ ವೇಳೆಗೆ ಭಾರತದ ಮಹತ್ವಾಕಾಂಕ್ಷೆಯ ಯೋಜನೆ ಗಗನಯಾನದಲ್ಲಿನಾಲ್ಕು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಗಗನಯಾನ ಯೋಜನೆಯಗಗನನೌಕೆಗಳ ಪರೀಕ್ಷೆ ಮತ್ತು ಗಗನಯಾತ್ರಿಗಳ ತರಬೇತಿಯು ಈ ವರ್ಷದ ಪ್ರಧಾನ ಚಟುವಟಿಕೆಗಳಾಗಿವೆ ಎಂದಿದ್ದಾರೆ ಶಿವನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.