ADVERTISEMENT

ಭಾರತದ ಅತ್ಯಂತ ಹಿರಿಯ ಗಂಡು ಕರಡಿ ಬಬ್ಲೂ ಇನ್ನಿಲ್ಲ

ಭಾರತದಲ್ಲಿ ಮೃಗಾಲಯದಲ್ಲಿರುವ ಅತ್ಯಂತ ಹಿರಿಯ ಗಂಡು ಕರಡಿ

ಪಿಟಿಐ
Published 5 ಜನವರಿ 2024, 13:39 IST
Last Updated 5 ಜನವರಿ 2024, 13:39 IST
<div class="paragraphs"><p>ಕರಡಿ</p></div>

ಕರಡಿ

   

ಭೋಪಾಲ್ (ಮಧ್ಯಪ್ರದೇಶ): ಭಾರತದಲ್ಲಿ ಮೃಗಾಲಯದಲ್ಲಿರುವ ಅತ್ಯಂತ ಹಿರಿಯ ಗಂಡು ಕರಡಿ ಎಂದು ಖ್ಯಾತಿಯಾಗಿದ್ದ 'ಬಬ್ಲೂ' ಭೋಪಾಲ್‌ನ ವನವಿಹಾರ ರಾಷ್ಟ್ರೀಯ ಉದ್ಯಾನ ಹಾಗೂ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಶುಕ್ರವಾರ ಮೃತಪಟ್ಟಿದೆ.

ಬಬ್ಲೂ ಕರಡಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿತ್ತು. ಕಳೆದ ನಾಲ್ಕೈದು ದಿನಗಳಿಂದ ಆಹಾರ ತ್ಯಜಿಸಿತ್ತು. ಅದಕ್ಕೆ 36 ವರ್ಷ ವಯಸ್ಸಾಗಿತ್ತು ಎಂದು ಪಶುಚಿಕಿತ್ಸಕ ಡಾ. ಅತುಲ್ ಗುಪ್ತಾ ತಿಳಿಸಿದ್ದಾರೆ.

ADVERTISEMENT

19 ವರ್ಷ ವಯಸ್ಸಿದ್ದಾಗ ಬಬ್ಲೂವನ್ನು 2006ರಲ್ಲಿ ರಾಜಸ್ಥಾನದ ಗ್ರಾಮವೊಂದರಲ್ಲಿ ಕರಡಿ ಕುಣಿಸುವವರಿಂದ ರಕ್ಷಿಸಿ ವನವಿಹಾರ ಕರಡಿಧಾಮಕ್ಕೆ ಕರೆತರಲಾಗಿತ್ತು.

2022 ರಲ್ಲಿ ಇದೇ ವನವಿಹಾರದಲ್ಲಿ 40 ವರ್ಷದ ಹೆಣ್ಣು ಕರಡಿ ಗುಲಾಬೊ ಮೃತಪಟ್ಟಿತ್ತು. ಕರಡಿಗಳು ಸಾಮಾನ್ಯವಾಗಿ 25ರಿಂದ 30 ವರ್ಷ ಬದುಕುತ್ತವೆ. ಪ್ರಾಣಿ ಸಂಗ್ರಹಾಲಯದಲ್ಲಿ ಸ್ವಲ್ಪ ಹೆಚ್ಚು ಎಂದು ಅವರು ತಿಳಿಸಿದ್ದಾರೆ.

ಬಬ್ಲೂವಿನ ಮೃತದೇಹವನ್ನು ಅಧ್ಯಯನ ದೃಷ್ಟಿಯಿಂದ ಜಬಲ್ಪುರದ ವನ್ಯಜೀವಿ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ಗುಪ್ತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.