ADVERTISEMENT

175 ಪ್ರಯಾಣಿಕರಿದ್ದ ಇಂಡಿಗೊ ವಿಮಾನಕ್ಕೆ ಹದ್ದು ಡಿಕ್ಕಿ; ತುರ್ತು ಭೂಸ್ಪರ್ಶ

ಪಿಟಿಐ
Published 2 ಜೂನ್ 2025, 15:21 IST
Last Updated 2 ಜೂನ್ 2025, 15:21 IST
<div class="paragraphs"><p>ಹಾನಿಗೊಂಡಿರುವ ಇಂಡಿಗೋ ವಿಮಾನವನ್ನು ಸಿಬ್ಬಂದಿ ಪರಿಶೀಲಿಸಿದರು </p></div>

ಹಾನಿಗೊಂಡಿರುವ ಇಂಡಿಗೋ ವಿಮಾನವನ್ನು ಸಿಬ್ಬಂದಿ ಪರಿಶೀಲಿಸಿದರು

   

– ಪಿಟಿಐ ಚಿತ್ರ

ರಾಂಚಿ: ಹದ್ದು ಡಿಕ್ಕಿ ಹೊಡೆದ ಕಾರಣಕ್ಕೆ ಇಂಡಿಗೋ ವಿಮಾನವು ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಸೋಮವಾರ ತುರ್ತು ಭೂಸ್ಪರ್ಶ ಮಾಡಿದೆ.

ADVERTISEMENT

‘ಏರ್‌ಬಸ್‌ 320’ಗೆ ಹಾನಿಯಾಗಿದ್ದು, ಅದರಲ್ಲಿದ್ದ 175 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’ ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ಆರ್. ಆರ್. ಮೌರ್ಯ ತಿಳಿಸಿದ್ದಾರೆ.

‘ಪಟ್ನಾದಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಮಧ್ಯಾಹ್ನ 1.14ರ ವೇಳೆಗೆ ಆಕಾಶದಲ್ಲಿ ಹದ್ದು ಡಿಕ್ಕಿ ಹೊಡೆದಿದೆ. ಇಲ್ಲಿಂದ ಸುಮಾರು 10 ರಿಂದ 12 ನಾಟಿಕಲ್ ಮೈಲು ದೂರದಲ್ಲಿ, ಸುಮಾರು 3,000 ರಿಂದ 4,000 ಅಡಿ ಎತ್ತರದಲ್ಲಿದ್ದಾಗ ಘಟನೆ ಸಂಭವಿಸಿದೆ. ತಕ್ಷಣ ಪೈಲಟ್‌ ವಿಮಾನವನ್ನು ತಕ್ಷಣ ಭೂಸ್ಪರ್ಶ ಮಾಡಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಘಟನೆ ಕುರಿತು ಇಂಡಿಗೊದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.