ಇಂಡಿಗೊ ವಿಮಾನ
ಪ್ರಾತಿನಿಧಿಕ ಚಿತ್ರ
ನವದೆಹಲಿ: ಇಂಡಿಗೊ ವಿಮಾನಯಾನ ಸಂಸ್ಥೆಯು ದೆಹಲಿ ವಿಮಾನ ನಿಲ್ದಾಣದಲ್ಲಿ ತನ್ನ 125 ವಿಮಾನಗಳನ್ನು ಟರ್ಮಿನಲ್ 2ರಿಂದ ಟರ್ಮಿನಲ್ 1ಕ್ಕೆ ಮಂಗಳವಾರ ಸ್ಥಳಾಂತರಿಸಿದೆ.
ಟರ್ಮಿನಲ್ 2ರಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿದ್ದು, ಅಲ್ಲಿನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಇಂಡಿಗೊ ಹೇಳಿದೆ.
ಮಂಗಳವಾರದಿಂದ ಟರ್ಮಿನಲ್ 1ರಿಂದ ನಿತ್ಯ 200ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುತ್ತಿವೆ. ಟಿ1ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ನಿತ್ಯ 15 ಸಾವಿರದಿಂದ 40ಸಾವಿರಕ್ಕೆ ಏರಿಕೆಯಾಗಿದೆ. ಅದರಂತೆಯೇ ವಿಮಾನಗಳ ಹಾರಾಟವು ಸದ್ಯ 75 ಇದ್ದು, ಇದು ಈಗ 200ಕ್ಕೆ ಏರಿಕೆಯಾಗಿದೆ.
ಇದರಿಂದಾಗಿ 26 ವಿಮಾನಗಳು ಟರ್ಮಿನಲ್ 2ರಲ್ಲಿ ರಾತ್ರಿ ತಂಗುತ್ತಿದ್ದವು. ಇವುಗಳನ್ನು ಟಿ1ಗೆ ಸರಳವಾಗಿ ಸ್ಥಳಾಂತರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಗ್ರಾಹಕರು ಸಹಕರಿಸುವ ಭರವಸೆ ಇದೆ ಎಂದು ಇಂಡಿಗೊ ಸಿಇಒ ಪೀಟರ್ ಎಲ್ಬರ್ಸ್ ಹೇಳಿದ್ದಾರೆ.
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸದ್ಯ ಇಂಡಿಗೊ ಮತ್ತು ಆಕಾಸ ಏರ್ ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.