ADVERTISEMENT

ಬರೇಲಿ ನಗರದಿಂದ ಬೆಂಗಳೂರು, ಮುಂಬೈಗೆ ಇಂಡಿಗೊ ವಿಮಾನ ಸೇವೆ

ಪಿಟಿಐ
Published 4 ಮಾರ್ಚ್ 2021, 10:38 IST
Last Updated 4 ಮಾರ್ಚ್ 2021, 10:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಉತ್ತರ ಪ್ರದೇಶದ ಬರೇಲಿ ನಗರದಿಂದ ಬೆಂಗಳೂರು ಮತ್ತು ಮುಂಬೈಗೆ ಇಂಡಿಗೊ ಸಂಸ್ಥೆಯು ಏಪ್ರಿಲ್‌ 29ರ ನಂತರ ವಿಮಾನ ಸೇವೆಯನ್ನು ಆರಂಭಿಸಲಿದೆ.

ಮುಂಬೈ–ಬರೇಲಿ ಮಾರ್ಗದಲ್ಲಿ ವಾರಕ್ಕೆ ನಾಲ್ಕು ಬೆಂಗಳೂರು–ಬರೇಲಿ ನಡುವೆ ವಾರಕ್ಕೆ ಮೂರು ವಿಮಾನಗಳು ಸಂಚರಿಸಲಿವೆ ಎಂದು ಇಂಡಿಗೊ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಇಂಡಿಗೊ ಸಂಸ್ಥೆಯು ವಿಮಾನಸೇವೆ ಕಲ್ಪಿಸುತ್ತಿರುವಉತ್ತರ ಪ್ರದೇಶದ ಆರನೇ ಹಾಗೂ ದೇಶದ 67ನೇ ನಗರ ಬರೇಲಿ ಆಗಿದೆ. ಈ ನಗರವು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದು, ಉತ್ಪಾದನಾ ಕ್ಷೇತ್ರವು ಹೆಚ್ಚಿನ ಪ್ರಗತಿ ಕಾಣುತ್ತಿದೆ ಎಂದು ಹೇಳಿಕೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.