ADVERTISEMENT

ತ್ರಿಪುರಾದಲ್ಲಿ ಭಾರತ–ಬಾಂಗ್ಲಾ ಗಡಿಗೆ ಮುಂದಿನ ವರ್ಷದಲ್ಲಿ ಸಂಪೂರ್ಣ ಬೇಲಿ

ಪಿಟಿಐ
Published 1 ಜನವರಿ 2022, 14:38 IST
Last Updated 1 ಜನವರಿ 2022, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಗರ್ತಲಾ, ತ್ರಿಪುರಾ: ಸೂಕ್ತ ಭದ್ರತೆಗಾಗಿ ಮುಂದಿನ ವರ್ಷದ ವೇಳೆಗೆ ತ್ರಿಪುರಾದಲ್ಲಿನ ಭಾರತ–ಬಾಂಗ್ಲಾದೇಶ ಗಡಿಗೆ ಸಂಪೂರ್ಣ ಬೇಲಿ ಹಾಕಲಾಗುವುದು ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಉನ್ನತಾಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

856 ಕಿ.ಮೀ.ಉದ್ದದ ಭಾರತ–ಬಾಂಗ್ಲಾದೇಶ ಗಡಿಗೆ ಈಗಾಗಲೇ ಶೇ 80–85 ರಷ್ಟು ಬೇಲಿ ಹಾಕಲಾಗಿದೆ ಎಂದು ಬಿಎಸ್‌ಎಫ್‌ನ ಇನ್‌ಸ್ಪಕ್ಟರ್‌ ಜನರಲ್‌ ಸುಶಾಂತ್‌ ಕುಮಾರ್‌ನಾಥ್‌ ಹೇಳಿದರು.

‘ಕಳೆದ ವರ್ಷ ತ್ರಿಪುರಾದ ಪೂರ್ವ ವಲಯದಲ್ಲಿ ಬೇಲಿ ಹಾಕುವ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಆದ್ಯತೆಯ ಮೇರೆಗೆ 31 ಕಿ.ಮೀ. ಉದ್ದದ ಸುರಂಗ ಕೊರೆಯುವ ಕಾಮಗಾರಿ ಕೈಗೊಳ್ಳಲಾಗಿದೆ. ರಾಜ್ಯದ ಪಶ್ಚಿಮ ವಲಯದಲ್ಲಿ 10 ಕಿ.ಮೀ. ಏಕಸಾಲು ಬೇಲಿ ಹಾಕಲಾಗಿದೆ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.