ADVERTISEMENT

ಸ್ವಚ್ಛ ಗಾಳಿ: ಇಂದೋರ್, ಅಮರಾವತಿ, ದೇವಾಸ್‌ಗೆ ಪ್ರಥಮ ಸ್ಥಾನ

ಪಿಟಿಐ
Published 9 ಸೆಪ್ಟೆಂಬರ್ 2025, 23:57 IST
Last Updated 9 ಸೆಪ್ಟೆಂಬರ್ 2025, 23:57 IST
ಸಾಂದರ್ಭಿಕ (ಪಿಟಿಐ ಸಂಗ್ರಹ ಚಿತ್ರ)
ಸಾಂದರ್ಭಿಕ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ಇಂದೋರ್, ಅಮರಾವತಿ ಮತ್ತು ದೇವಾಸ್ ನಗರಗಳು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (ಎನ್‌ಸಿಎಪಿ) ಅಡಿಯಲ್ಲಿ ವಾಯುಮಾಲಿನ್ಯ ತಡೆಗಟ್ಟುವಲ್ಲಿ ಅತ್ಯುತ್ತಮ ಪ್ರಯತ್ನ ನಡೆಸಿ ಅಗ್ರ ಸ್ಥಾನ ಪಡೆದಿವೆ.

10 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ವಿಭಾಗ ( ಅಗ್ರ ನಗರಗಳು)

1.ಇಂದೋರ್ (ಮಧ್ಯಪ್ರದೇಶ)

ADVERTISEMENT

2.ಜಬಲ್‌ಪುರ (ಮಧ್ಯಪ್ರದೇಶ)

3.ಆಗ್ರಾ (ಉತ್ತರ ಪ್ರದೇಶ) ಮತ್ತು ಸೂರತ್ (ಗುಜರಾತ್‌)

3–10 ಲಕ್ಷ ಜನಸಂಖ್ಯೆಯ ವಿಭಾಗ (ಅಗ್ರ ನಗರಗಳು)

1.ಅಮರಾವತಿ (ಮಹಾರಾಷ್ಟ್ರ)

2.ಝಾನ್ಸಿ ಮತ್ತು ಮೊರಾದಾಬಾದ್ (ಉತ್ತರಪ್ರದೇಶ)

3.ಅಲ್ವರ್‌ (ರಾಜಸ್ಥಾನ)

3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ವಿಭಾಗ (ಅಗ್ರ ನಗರಗಳು)

1.ದೇವಾಸ್ (ಮಧ್ಯಪ್ರದೇಶ)

2.ಪರ್ವಾನೋ (ಹಿಮಾಚಲ ಪ್ರದೇಶ)

3.ಅನುಗುಲ್ (ಒಡಿಶಾ)

‘ವಾರ್ಡ್‌ಗಳಲ್ಲೂ ಮೌಲ್ಯಮಾಪನ’

ಹಲವಾರು ನಗರಗಳು ಕೈಗಾರಿಕಾ ಕೇಂದ್ರಗಳಾಗಿದ್ದರೂ ಅಥವಾ ಕಲ್ಲಿದ್ದಲು ಗಣಿಗಾರಿಕೆಯನ್ನು ಹೊಂದಿದ್ದರೂ ಭಾರಿ ಪ್ರಗತಿಯನ್ನು ಸಾಧಿಸಿವೆ. ಮುಂದಿನ ವರ್ಷದಿಂದ ನಗರಗಳ ವಾರ್ಡ್‌ಗಳಲ್ಲಿ ಕೂಡ ವಾಯುಮಾಲಿನ್ಯ ತಡೆಗಟ್ಟುವ ಪ್ರಯತ್ನಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ – ಭೂಪೇಂದರ್ ಯಾದವ್, ಕೇಂದ್ರ ಪರಿಸರ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.