ADVERTISEMENT

ಗರ್ಭಿಣಿಗೆ ಎಚ್‍ಐವಿ ಸೋಂಕು ರಕ್ತ ವರ್ಗಾವಣೆ: ರಕ್ತದಾನಿ ಆತ್ಮಹತ್ಯೆಗೆ ಯತ್ನ 

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 4:44 IST
Last Updated 28 ಡಿಸೆಂಬರ್ 2018, 4:44 IST
   

ಚೆನ್ನೈ: ಆಸ್ಪತ್ರೆಯ ಸಿಬ್ಬಂದಿಯ ಅಚಾತುರ್ಯದಿಂದ ಸೋಂಕಿತ ರಕ್ತ ವರ್ಗಾವಣೆ ಮಾಡಿದ ಕಾರಣ ಗರ್ಭಿಣಿ ಮಹಿಳೆಯೊಬ್ಬರಿಗೆ ಎಚ್‌ಐವಿ ಕಾಣಿಸಿಕೊಂಡಿರುವ ಪ್ರಕರಣ ತಮಿಳುನಾಡಿನ ವಿರುಧುನಗರ್ ಜಿಲ್ಲೆಯ ಸತ್ತೂರ್‌ನಲ್ಲಿ ನಡೆದಿದೆ.

ಗರ್ಭಿಣಿ ಮಹಿಳೆಗೆ ಹದಿಹರೆಯದ ಬಾಲಕನೊಬ್ಬ ರಕ್ತದಾನ ಮಾಡಿದ್ದನು.ಆದರೆ ಈ ರಕ್ತ ಎಚ್‍ಐವಿ ಸೋಂಕಿತ ರಕ್ತ ಎಂದು ತಿಳಿದುಬಂದ ನಂತರ ರಕ್ತದಾನ ಮಾಡಿದ್ದ ಬಾಲಕ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಏನಿದು ಪ್ರಕರಣ?
ಇಲ್ಲಿನ ವಿರುಧುನಗರ್ ಜಿಲ್ಲೆಯ ಸತ್ತೂರ್ ಎಂಬಲ್ಲಿ ಡಿಸೆಂಬರ್ 3ರಂದು ಗರ್ಭಿಣಿ ಮಹಿಳೆ ಚೆಕ್ ಅಪ್‍ಗಾಗಿ ಬಂದಿದ್ದರು.ಆಕೆಗೆ ರಕ್ತದ ಕೊರತೆ ಇದೆ ಎಂದು ಹೇಳಿದ ವೈದ್ಯರು ನಾಲ್ಕು ದಿನಗಳ ನಂತರ ರಕ್ತದ ವರ್ಗಾವಣೆ ಮಾಡಿದ್ದರು. ಆದರೆ ವರ್ಗಾವಣೆ ಮಾಡಿದ ರಕ್ತ ಎಚ್‍ಐ ಸೋಂಕಿನಿಂದ ಕೂಡಿತ್ತು ಎಂದು ಆಮೇಲೆ ತಿಳಿದುಬಂದಿದೆ.

ADVERTISEMENT

ಆಸ್ಪತ್ರೆಯ ಲ್ಯಾಬ್ ಟೆಕ್ನಿಷನ್‍ಗಳ ಅಚಾತುರ್ಯದಿಂದ ಸೋಂಕಿತ ರಕ್ತ ವರ್ಗಾವಣೆಯಾಗಿತ್ತು.
ಪ್ರಕರಣದ ಪ್ರಾಥಮಿಕ ತನಿಖೆ ನಂತರ ಆಸ್ಪತ್ರೆಯ ಬ್ಲಡ್ ಬ್ಯಾಂಕ್‍ನ ಮೂವರು ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.