ADVERTISEMENT

ಭಾರತೀಯ ವೃತ್ತಪತ್ರಿಕೆಗಳಿಗೆ ನಿರ್ಬಂಧ: ಚೀನಾ ಕ್ರಮಕ್ಕೆ ಐಎನ್‍ಎಸ್‍ ಖಂಡನೆ

ಪಿಟಿಐ
Published 2 ಜುಲೈ 2020, 9:07 IST
Last Updated 2 ಜುಲೈ 2020, 9:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ವೃತ್ತಪತ್ರಿಕೆಗಳು ಮತ್ತು ವೆಬ್‍ಸೈಟ್‍ಗಳ ಮೇಲೆ ನಿರ್ಬಂಧ ಹೇರುವ ಚೀನಾದ ಕ್ರಮಕ್ಕೆ ಭಾರತೀಯ ವೃತ್ತಪತ್ರಿಕೆಗಳ ಸಂಸ್ಥೆ (ಐಎನ್‍ಎಸ್‍) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪ್ರತಿಯಾಗಿ ಭಾರತದಲ್ಲಿಯೂ ಚೀನಾದ ಮಾಧ್ಯಮಗಳ ಮೇಲೂ ನಿಷೇಧ ಹೇರಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಐಎನ್‍ಎಸ್‍ ಅಧ್ಯಕ್ಷ ಶೈಲೇಶ್‍ ಗುಪ್ತಾ, ಭಾರತದ ಮಾಧ್ಯಮಗಳು ಮತ್ತು ವೆಬ್‌ಸೈಟ್‌ಗಳ ವೀಕ್ಷಣೆಗೆ ಅವಕಾಶ ಸಿಗದಂತೆ ನಿರ್ಬಂಧಿಸುವ ಚೀನಾದ ಕ್ರಮ ಸರಿಯಲ್ಲ. ಅತ್ಯಾಧುನಿಕ ತಂತ್ರಜ್ಞಾನದ ಫೈರ್‌ವಾಲ್‌ಗಳ ಮೂಲಕ, ವಿಪಿಎನ್‍ (ವರ್ಚುಯೆಲ್ ಪ್ರೈವೇಟ್ ನೆಟ್‍ವರ್ಕ್) ಮೂಲಕ ಮಾಹಿತಿ ಪಡೆಯುವುದನ್ನೂ ನಿರ್ಬಂಧಿಸಲಾಗಿದೆ ಎಂದು ದೂರಿದ್ದಾರೆ.

ADVERTISEMENT

ಭಾರತದಲ್ಲೂ ಚೀನಾ ಮಾಧ್ಯಮಗಳ ವೀಕ್ಷಣೆಗೆ ಇರುವ ಹಾದಿಗಳನ್ನು ನಿರ್ಬಂಧಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಭಾರತದ ಮಾಧ್ಯಮ ಕಂಪನಿಗಳಲ್ಲಿ ಚೀನಾ ಸಹಯೋಗ/ಪಾಲುದಾರಿಕೆಯನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.