ADVERTISEMENT

2500 ಕೆ.ಜಿ ಮಾದಕ ವಸ್ತು ಜಪ್ತಿ ಮಾಡಿದ ಭಾರತೀಯ ನೌಕಾಪಡೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 14:44 IST
Last Updated 2 ಏಪ್ರಿಲ್ 2025, 14:44 IST
ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ನೌಕೆಯೊಂದನ್ನು ಭಾರತೀಯ ನೌಕಾಪಡೆಯು ವಶಪಡಿಸಿಕೊಂಡಿತು
ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ನೌಕೆಯೊಂದನ್ನು ಭಾರತೀಯ ನೌಕಾಪಡೆಯು ವಶಪಡಿಸಿಕೊಂಡಿತು   

ಮುಂಬೈ: ಹಿಂದೂ ಮಹಾಸಾಗರದಲ್ಲಿ ಬೃಹತ್‌ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆಯ ‘ಐಎನ್‌ಎಸ್‌ ತರ್‌ಕಶ್‌’ ಯುದ್ಧ ನೌಕೆಯು 2500 ಕೆ.ಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. 

‘ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಮಾರ್ಚ್ 31ರಂದು ಮಾದಕವಸ್ತುಗಳನ್ನು ಜಪ್ತಿ ಮಾಡಲಾಯಿತು’ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಇತ್ತೀಚೆಗೆ ನಡೆದ ಅತಿ ದೊಡ್ಡ ಪ್ರಮಾಣದ ಜಪ್ತಿ ಇದಾಗಿದೆ.

ADVERTISEMENT

ಅನುಮಾನಾಸ್ಪದ ನೌಕೆಗಳ ಚಲನವಲನಗಳ ಬಗ್ಗೆ ನೌಕಾಪಡೆಯ ಪಿ81 ಯುದ್ಧವಿಮಾನವು ಗಸ್ತು ತಿರುಗುತ್ತಿದ್ದ ‘ಐಎನ್‌ಎಸ್‌ ತರ್‌ಕಶ್‌’ ನೌಕೆಗೆ ಮಾಹಿತಿ ನೀಡಿತ್ತು. ತಕ್ಷಣ ಕಾರ್ಯಾಚರಣೆ ಆರಂಭಿಸಿದ ‘ತರ್‌ಕಶ್‌’ ಅನುಮಾನಾಸ್ಪದ ನೌಕೆಗಳ ಪರಿಶೀಲನೆ ನಡೆಸಿತು. ತನ್ನ ಹೆಲಿಕಾಪ್ಟರ್‌ ಮೂಲಕ ಅನುಮಾನಾಸ್ಪದ ನೌಕೆಯೊಂದನ್ನು ಪತ್ತೆ ಹಚ್ಚಿತು. ನೌಕಾಪಡೆಯ ಕಮಾಂಡೊಗಳು ಮತ್ತು ವಿಶೇಷ ತಂಡ ಆ ನೌಕೆಯಲ್ಲಿ ಶೋಧ ನಡೆಸಿದಾಗ 2386 ಕೆ.ಜಿ ಹ್ಯಾಶಿಶ್‌ ಮತ್ತು 121 ಕೆ.ಜಿ ಹೆರಾಯಿನ್‌ ಸೇರಿದಂತೆ 2500 ಕೆ.ಜಿಗೂ ಅಧಿಕ ಪ್ರಮಾಣದ ಮಾದಕವಸ್ತುಗಳು ಪತ್ತೆಯಾಗಿವೆ.

ಮಾದಕ ವಸ್ತುಗಳಿದ್ದ ನೌಕೆಯನ್ನು ನಿಯಂತ್ರಣಕ್ಕೆ ಪಡೆದುಕೊಂಡ ‘ತರ್‌ಕಶ್‌’, ಅಕ್ರಮ ಚಟುವಟಿಕೆ ನಡೆಸುತ್ತಿರುವ ಇತರ ನೌಕೆಗಳ ಬಗ್ಗೆ ಕಾರ್ಯಾಚರಣೆ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.