ADVERTISEMENT

ವಿಡಿಯೊ ನೋಡಿ: ಅತಿ ಎತ್ತರದ ಮೌಂಟ್ ಅಬಿ ಗಮಿನ್‌ನಲ್ಲಿ ಯೋಗ, ಐಟಿಬಿಪಿ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2022, 6:50 IST
Last Updated 6 ಜೂನ್ 2022, 6:50 IST
ಮೌಂಟ್ ಅಬಿ ಗಮಿನ್‌ನಲ್ಲಿ ಐಟಿಬಿಪಿ ಸಿಬ್ಬಂದಿ ಯೋಗಾಭ್ಯಾಸ (ಚಿತ್ರ ಕೃಪೆ – ಐಟಿಬಿಪಿ ಟ್ವಿಟರ್‌ ಹ್ಯಾಂಡಲ್)
ಮೌಂಟ್ ಅಬಿ ಗಮಿನ್‌ನಲ್ಲಿ ಐಟಿಬಿಪಿ ಸಿಬ್ಬಂದಿ ಯೋಗಾಭ್ಯಾಸ (ಚಿತ್ರ ಕೃಪೆ – ಐಟಿಬಿಪಿ ಟ್ವಿಟರ್‌ ಹ್ಯಾಂಡಲ್)   

ನವದೆಹಲಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಉತ್ತರಾಖಂಡದ ಅತಿ ಎತ್ತರದ ಹಿಮ ಶಿಖರ ಮೌಂಟ್ ಅಬಿ ಗಮಿನ್‌ನಲ್ಲಿ ಯೋಗಾಭ್ಯಾಸ ಪ್ರದರ್ಶನ ಮಾಡಿ ದಾಖಲೆ ನಿರ್ಮಿಸಿದ್ದಾರೆ.

‘ಮಾನವೀಯತೆಗಾಗಿ ಯೋಗ’ ಎಂಬ ಧ್ಯೇಯ ಇಟ್ಟುಕೊಂಡು ಆಚರಿಸಲಾಗುತ್ತಿರುವ ಈ ಬಾರಿಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ನಮ್ಮ ‘ಹಿಮ ವೀರರು’ ಉತ್ತರಾಖಂಡದ, ಸಮುದ್ರ ಮಟ್ಟದಿಂದ 22,850 ಅಡಿ ಎತ್ತರದಲ್ಲಿರುವ ಮೌಂಟ್ ಅಬಿ ಗಮಿನ್‌ನಲ್ಲಿ ಯೋಗಾಭ್ಯಾಸ ಪ್ರದರ್ಶಿಸಿ ದಾಖಲೆ ನಿರ್ಮಿಸಿದರು ಎಂದು ಐಟಿಬಿಪಿ ಟ್ವೀಟ್ ಮಾಡಿದೆ. ಜತೆಗೆ ಯೋಗಾಭ್ಯಾಸ ಪ್ರದರ್ಶಿಸುತ್ತಿರುವ ವಿಡಿಯೊವನ್ನೂ ಪ್ರಕಟಿಸಿದೆ.

ಸಿಬ್ಬಂದಿ ಯೋಗದ ವಿವಿಧ ಭಂಗಿಗಳಲ್ಲಿರುವ ಹಲವು ಚಿತ್ರಗಳನ್ನೂ ಐಟಿಬಿಪಿ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.