ADVERTISEMENT

 ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ ವಿಚಾರಣೆ ಅವಧಿ 24ರವರೆಗೆ ವಿಸ್ತರಣೆ  

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 14:48 IST
Last Updated 17 ಅಕ್ಟೋಬರ್ 2019, 14:48 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ:ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ವಿಚಾರಣೆ ಅವಧಿಯನ್ನು ಅಕ್ಟೋಬರ್ 24ರವರೆಗೆ ವಿಸ್ತರಿಸಿ ದೆಹಲಿ ಕೋರ್ಟ್ ಆದೇಶ ನೀಡಿದೆ.

ಚಿದಂಬರಂ ಅವರನ್ನು ವಿಚಾರಣೆಗೊಳಪಡಿಸಲು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ)ಅನುಮತಿ ನೀಡಿದ್ದಾರೆ. ಇದರ ಜತೆಗೆ ಮನೆಯೂಟ, ಪಾಶ್ಚಾತ್ಯ ಶೈಲಿಯ ಶೌಚಾಲಯ ಮತ್ತು ಔಷಧಿಗಳ ಪೂರೈಕೆಗೆ ನ್ಯಾಯಾಲಯ ಅನುಮತಿ ನೀಡಿದೆ. 74ರ ಹರೆಯದ ಹಿರಿಯ ಕಾಂಗ್ರೆಸ್ ನೇತಾರನ ವಿಚಾರಣೆಗಾಗಿ 14 ದಿನ ಬೇಕು ಎಂದು ಇಡಿ ಮನವಿ ಮಾಡಿತ್ತು.

ಅದೇ ವೇಳೆ ಐಎನ್‌ಎಕ್ಸ್ ಮೀಡಿಯಾ ಅವ್ಯವಹಾರದಲ್ಲಿ ಚಿದಂಬರಂ ವಿರುದ್ಧ ಸಿಬಿಐ ಪ್ರಕರಣದಾಖಲಿಸಿದ್ದು, ಈ ಸಂಬಂಧ ನ್ಯಾಯಾಂಗ ಬಂಧನ ಅವಧಿಯನ್ನೂನ್ಯಾಯಾಲಯ ಅಕ್ಟೋಬರ್ 24ಕ್ಕೆ ವಿಸ್ತರಿಸಿದೆ.

ಚಿದಂಬರಂ ನ್ಯಾಯಾಲಯಕ್ಕೆ ಹಾಜರಾಗಲು ಬುಧವಾರ ವಾರೆಂಟ್ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.