ADVERTISEMENT

ರಾಜಸ್ಥಾನದ ಎಲ್ಲ ಶಾಸಕರಿಗೆ ‘ಐಫೋನ್ 13’ ಉಡುಗೊರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2022, 15:59 IST
Last Updated 23 ಫೆಬ್ರುವರಿ 2022, 15:59 IST
ಆ್ಯಪಲ್ ಐಫೋನ್ 13 – ಪ್ರಜಾವಾಣಿ ಸಂಗ್ರಹ ಚಿತ್ರ
ಆ್ಯಪಲ್ ಐಫೋನ್ 13 – ಪ್ರಜಾವಾಣಿ ಸಂಗ್ರಹ ಚಿತ್ರ   

ಜೈಪುರ: ರಾಜಸ್ಥಾನದ ಎಲ್ಲ 200 ಶಾಸಕರಿಗೆ ಅಶೋಕ್ ಗೆಹಲೋತ್ ಸರ್ಕಾರವು ‘ಐಫೋನ್ 13’ ಅನ್ನು ಉಡುಗೊರೆ ನೀಡಿದೆ.

ರಾಜಸ್ಥಾನ ವಿಧಾನಸಭೆಯಲ್ಲಿ ಬುಧವಾರ ಬಜೆಟ್‌ ಮಂಡಿಸಲಾಗಿದ್ದು, ಬಳಿಕ ಉಡುಗೊರೆ ನೀಡಲಾಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಬಜೆಟ್ ಪ್ರತಿಯ ಜತೆಗೆ ಎಲ್ಲ ಶಾಸಕರಿಗೆ ‘ಐಪ್ಯಾಡ್‌’ಗಳನ್ನು ನೀಡಲಾಗಿತ್ತು.

ಸಾಮಾನ್ಯವಾಗಿ ಬಜೆಟ್ ಮಂಡನೆ ಬಳಿಕ ಸದನದಿಂದ ತೆರಳುವಾಗ ಶಾಸಕರಿಗೆ ಬಜೆಟ್ ಪ್ರತಿಯುಳ್ಳ ಬ್ರೀಫ್‌ಕೇಸ್ ನೀಡಲಾಗುತ್ತದೆ. ಆದರೆ, ಈ ಬಾರಿ ಬಜೆಟ್ ಪ್ರತಿಯ ಜತೆಗೆ ‘ಐಫೋನ್ 13’ ಒಳಗೊಂಡ ಸ್ಮಾರ್ಟ್‌ ಬ್ರೀಫ್‌ಕೇಸ್ ನೀಡಲಾಗಿದೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ADVERTISEMENT

ಈ ಉಡುಗೊರೆಗೆಹೆಚ್ಚಿನ ಶಾಸಕರು ಪಕ್ಷಾತೀತವಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಉಡುಗೊರೆ ನೀಡಲು ರಾಜ್ಯ ಸರ್ಕಾರಕ್ಕೆ ಸುಮಾರು ₹1.5 ಕೋಟಿ ವೆಚ್ಚವಾಗಿದೆ ಎಂದೂ ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.