ADVERTISEMENT

‘ಭಾರತೀಯ ಅಂತರಿಕ್ಷ ನಿಲ್ದಾಣ’ದ ಮಾದರಿ ಅನಾವರಣ ಮಾಡಿದ ಇಸ್ರೊ

ಪಿಟಿಐ
Published 22 ಆಗಸ್ಟ್ 2025, 13:27 IST
Last Updated 22 ಆಗಸ್ಟ್ 2025, 13:27 IST
<div class="paragraphs"><p>‘ಭಾರತೀಯ ಅಂತರಿಕ್ಷ ನಿಲ್ದಾಣ’ದ ಮಾದರಿ ಅನಾವರಣ ಮಾಡಿದ ಇಸ್ರೊ</p></div>

‘ಭಾರತೀಯ ಅಂತರಿಕ್ಷ ನಿಲ್ದಾಣ’ದ ಮಾದರಿ ಅನಾವರಣ ಮಾಡಿದ ಇಸ್ರೊ

   

ಚಿತ್ರ ಕೃಪೆ:  ISROSpaceflight

ನವದೆಹಲಿ: ಇಲ್ಲಿ ಆರಂಭಗೊಂಡಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನದ ಆಚರಣೆಯಲ್ಲಿ ಇಸ್ರೊ ‘ಭಾರತೀಯ ಅಂತರಿಕ್ಷ ನಿಲ್ದಾಣ (ಬಿಎಎಸ್‌)ದ ಮಾದರಿಯನ್ನು ಶುಕ್ರವಾರ ಅನಾವರಣಗೊಳಿಸಿತು.

ADVERTISEMENT

2028ರ ವೇಳೆಗೆ ಅಂತರಿಕ್ಷದಲ್ಲಿ ತನ್ನದೇ ನಿಲ್ದಾಣ ಹೊಂದುವ ಯೋಜನೆ ಭಾರತದ್ದು.

ಪ್ರಸ್ತುತ ಎರಡು ಅಂತರರಾಷ್ಟ್ರೀಯ ಪ್ರಯೋಗಾಲಯಗಳಿವೆ. ಅವುಗಳೆಂದರೆ ಇಸ್ರೊ ಸೇರಿ ಐದು ಬಾಹ್ಯಾಕಾಶ ಸಂಸ್ಥೆಗಳು ನಿರ್ಮಿಸಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು ಚೀನಾದ ಟಿಯಾಂಗಾಂಗ್‌ ಬಾಹ್ಯಾಕಾಶ ನಿಲ್ದಾಣ.

2035ರ ವೇಳೆ ಐದು ಮಾಡ್ಯೂಲ್‌ಗಳ ಭಾರತೀಯ ಅಂತರಿಕ್ಷ ನಿಲ್ದಾಣ ಹೊಂದುವ ಗುರಿಯನ್ನು ಇಟ್ಟುಕೊಂಡಿದೆ. ಬಿಎಎಸ್‌–01 ಮಾಡ್ಯೂಲ್‌ 10 ಟನ್‌ ತೂಕ ಇರುವ ನಿರೀಕ್ಷೆ ಇದ್ದು, ಭೂಮಿಯಿಂದ 450 ಎತ್ತರದ ಕಕ್ಷೆಯಲ್ಲಿ ಸ್ಥಾಪನೆಯಾಗುವ ಸಾಧ್ಯತೆಯಿದೆ.

ಬಾಹ್ಯಾಕಾಶ, ಜೀವವಿಜ್ಞಾನ, ವೈದ್ಯಕೀಯ, ಅಂತರಗ್ರಹ ಪರಿಶೋಧನೆ ಸೇರಿದಂತೆ ವಿವಿಧ ದೃಷ್ಟಿಕೋನದಲ್ಲಿ ಅಧ್ಯಯನ ನಡೆಸಲು ಈ ವೇದಿಕೆ ನೆರವಾಗಲಿದೆ. ಅಲ್ಲದೆ, ಮಾನವನ ಆರೋಗ್ಯದ ಮೇಲೆ ಸೂಕ್ಷ್ಮ ಗುರುತ್ವದ ಪ್ರಭಾವ ಮತ್ತು ಬಾಹ್ಯಾಕಾಶದಲ್ಲಿ ಮಾನವ ಹೆಚ್ಚು ಕಾಲ ಇರಲು ಅಗತ್ಯವಾದ ತಂತ್ರಜ್ಞಾನದ ಪರೀಕ್ಷೆ ನಡೆಸಲು ಈ ನಿಲ್ದಾಣ ಅವಕಾಶ ಒದಗಿಸಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.