ADVERTISEMENT

‍‘ಪುಷ್ಪ’ ನಿರ್ಮಾಣ ಸಂಸ್ಥೆ ಕಚೇರಿಯಲ್ಲಿ ಐ.ಟಿ ಶೋಧ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 16:15 IST
Last Updated 21 ಜನವರಿ 2025, 16:15 IST
<div class="paragraphs"><p>Pushpa–2 Reloaded</p></div>

Pushpa–2 Reloaded

   

ಹೈದರಾಬಾದ್: ‘ಪುಷ್ಪ’ ಸಿನಿಮಾ ನಿರ್ಮಾಣ ಮಾಡಿದ ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆಯ ಕಚೇರಿ ಮತ್ತು ಟಾಲಿವುಡ್‌ನ ಪ್ರಮುಖ ನಿರ್ಮಾಪಕರಲ್ಲೊಬ್ಬರಾದ ‘ದಿಲ್’ರಾಜು (ವೆಂಕಟರಮಣ ರೆಡ್ಡಿ) ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು(ಐ.ಟಿ.) ಮಂಗಳವಾರ ಶೋಧ ನಡೆಸಿದೆ. 

ಇಲ್ಲಿನ ಜುಬಿಲಿ ಹಿಲ್ಸ್‌ ಮತ್ತು ಬಂಜಾರಾ ಹಿಲ್ಸ್‌ ಪ್ರದೇಶದಲ್ಲಿ ‘ದಿಲ್‌’ರಾಜು ಅವರಿಗೆ ಸೇರಿದ ಎಂಟು ಸ್ಥಳಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಐ.ಟಿ ತಂಡ ಶೋಧ ನಡೆಸಿದೆ. ‘ದಿಲ್‌’ರಾಜು ನಿರ್ಮಾಣದ ‘ಗೇಮ್‌ ಚೇಂಜರ್‌’ ಮತ್ತು ‘ಸಂಕ್ರಾಂತಿಕಿ ವಸ್ತುನ್ನಾಂ’ ಸಿನಿಮಾಗಳು ಈ ಸಂಕ್ರಾಂತಿ ವೇಳೆ ಬಿಡುಗಡೆಯಾಗಿದ್ದವು.

ADVERTISEMENT

ನವೀನ್‌ ಯೆರ್ನೇನಿ ಮತ್ತು ಯಲಮಂಚಲಿ ರವಿಶಂಕರ್‌ ಮಾಲೀಕತ್ವದ ಮೈತ್ರಿ ಮೂವೀಸ್‌ ನಿರ್ಮಾಣದ ‘ಪುಷ್ಪ–2’ ಸಿನಿಮಾ ಬಾಕ್ಸ್ ಆಫೀಸ್‌ ವರದಿಗಳ ಪ್ರಕಾರ ₹1,850 ಕೋಟಿ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.