ADVERTISEMENT

ದುಮ್ಕಾ ಲೋಕಸಭೆ ಕ್ಷೇತ್ರದಿಂದ ಹೇಮಂತ್‌ ಸೊರೇನ್‌ ಸ್ಪರ್ಧೆ ಇಲ್ಲ

ಬೇರೊಬ್ಬ ಶಾಸಕರನ್ನು ಕಣಕ್ಕಿಳಿಸಿದ ಜೆಎಂಎಂ

ಪಿಟಿಐ
Published 4 ಏಪ್ರಿಲ್ 2024, 15:15 IST
Last Updated 4 ಏಪ್ರಿಲ್ 2024, 15:15 IST
ಹೇಮಂತ್‌ ಸೊರೇನ್‌ 
ಹೇಮಂತ್‌ ಸೊರೇನ್‌    

ರಾಂಚಿ: ಜೈಲಿನಲ್ಲಿರುವ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದ್ದ ದುಮ್ಕಾ ಲೋಕಸಭಾ ಕ್ಷೇತ್ರಕ್ಕೆ ಬೇರೊಬ್ಬ ಶಾಸಕರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ಶಿಕಾರಿಪಾಡಾದ ಶಾಸಕರಾಗಿರುವ ನಳಿನ್‌ ಸೊರೇನ್ ಅವರನ್ನು ದುಮ್ಕಾ ಕ್ಷೇತ್ರದ ಲೋಕಸಭೆ ಅಭ್ಯರ್ಥಿಯನ್ನಾಗಿ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನಾಮ ನಿರ್ದೇಶನ ಮಾಡಿದೆ. ಹೀಗಾಗಿ ನಿರೀಕ್ಷೆಯಂತೆ ಹೇಮಂತ್ ದುಮ್ಕಾ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. 

ಟುಂಡೀ ಶಾಸಕ ಮಥುರಾ ಪ್ರಸಾದ್‌ ಮಹತೊ ಅವರನ್ನು ಗಿರಿಡೀಹ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಎಸ್‌ಟಿ (ಪರಿಶಿಷ್ಟ ಪಂಗಡ) ಮೀಸಲು ಕ್ಷೇತ್ರ ದುಮ್ಕಾದಲ್ಲಿ ಜೆಎಂಎಂನ ಮಾಜಿ ಶಾಸಕಿ ಹಾಗೂ ಹೇಮಂತ್‌ ಸೊರೇನ್‌ ಅವರ ಸೊಸೆ ಸೀತಾ ಸೊರೇನ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. 

ADVERTISEMENT

ಜೆಎಂಎಂ ಅಧ್ಯಕ್ಷ ಶಿಬು ಸೊರೇನ್‌ ಅವರ ಹಿರಿಯ ಸೊಸೆ ಸೀತಾ ಸೊರೇನ್‌ ಕಳೆದ ತಿಂಗಳು ಬಿಜೆಪಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.