ADVERTISEMENT

India Russia Relations | ಮೂರು ದಿನಗಳ ರಷ್ಯಾ ಪ್ರವಾಸ ಹೊರಟ ಜೈಶಂಕರ್

ಪಿಟಿಐ
Published 19 ಆಗಸ್ಟ್ 2025, 13:43 IST
Last Updated 19 ಆಗಸ್ಟ್ 2025, 13:43 IST
ವಿದೇಶಾಂಗ ಸಚಿವ ಎಸ್. ಜೈಶಂಕರ್
ವಿದೇಶಾಂಗ ಸಚಿವ ಎಸ್. ಜೈಶಂಕರ್   

ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ಮಾಸ್ಕೋಗೆ ಮೂರು ದಿನಗಳ ಭೇಟಿಗೆ ತೆರಳಿದ್ದಾರೆ. ಭೇಟಿಯಲ್ಲಿ ಭಾರತ–ರಷ್ಯಾ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಉದ್ದೇಶಿಸಲಾಗಿದೆ.

ಭಾರತದ ರಷ್ಯಾ ಕಚ್ಚಾ ತೈಲ ಖರೀದಿಗೆ ಶೇ 25ರಷ್ಟು ಹೆಚ್ಚುವರಿ ದಂಡವನ್ನು ವಿಧಿಸುವ ಮೂಲಕ ಅಮೆರಿಕ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ಏರಿಸಿದ್ದರು. ಇದರ ನಂತರ ಭಾರತ–ಅಮೆರಿಕ ಸಂಬಂಧದಲ್ಲಿ ಉಂಟಾದ ಒತ್ತಡದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿದೆ.

ಬುಧವಾರ ನಡೆಯಲಿರುವ 26ನೇ ಭಾರತ–ರಷ್ಯಾ ಅಂತರ ಸರ್ಕಾರ ಆಯೋಗದ (ಐಆರ್‌ಐಜಿಸಿ–ಟಿಇಸಿ) ಸಭೆಯ ಜಂಟಿ ಅಧ್ಯಕ್ಷತೆಯನ್ನು ಜೈಶಂಕರ್‌ ವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ರಷ್ಯಾದ ಮೊದಲ ಉಪಪ್ರಧಾನಿ ಡೆನಿಸ್ ಮಂಟುರೊ ಜಂಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಅದನ್ನು ಈ ಸಭೆಯು ಸುಗಮಗೊಳಿಸುವ ನಿರೀಕ್ಷೆ ಇದೆ. 

ADVERTISEMENT

ಉಕ್ರೇನ್‌ನಲ್ಲಿ ಶಾಂತಿಯ ಬಗ್ಗೆ ಟ್ರಂಪ್ ಆಡಳಿತದ ಕೈಗೊಂಡ ಉಪಕ್ರಮಗಳ ಬಗ್ಗೆ ಕೂಡ ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.