ಪಂಜಾಬ್‌ನ ಜಲಂಧರ್ ನಗರದ ಜನ ಮೊನ್ನೆ ಎದ್ದೊಡನೆ ಕಣ್ಣುಜ್ಜುತ್ತಾ ಕಂಡ ದೃಶ್ಯವನ್ನು ತಕ್ಷಣಕ್ಕೆ ನಂಬಲು ಸಿದ್ಧರೇ ಇರಲಿಲ್ಲ. ‘ಇದು ಬರೀ ಬೆಳಗಲ್ಲೋ ಅಣ್ಣಾ’ ಎಂಬ ಉದ್ಗಾರ ಸಹ ಅವರಿಂದ ಹೊರಟಿತ್ತು. ಏಕೆಂದರೆ, ಸುಮಾರು 200 ಕಿ.ಮೀ. ದೂರದಲ್ಲಿರುವ ಹಿಮಾಚಲ ಪ್ರದೇಶದ ಧೌಲಾಧಾರ ಪರ್ವತ ಶ್ರೇಣಿ 30 ವರ್ಷಗಳ ಬಳಿಕ ಅವರಿಗೆ ದರ್ಶನವನ್ನು ನೀಡಿತ್ತು! ಲಾಕ್‌ಡೌನ್‌ನಿಂದ ಮಾಲಿನ್ಯದ ಪ್ರಮಾಣವು ಗಣನೀಯವಾಗಿ ಕಡಿಮೆ ಆಗಿದ್ದರಿಂದ ಅಲ್ಲಿನ ಜನರಿಗೆ ಆ ಪರ್ವತ ಶ್ರೇಣಿಯನ್ನು ಮತ್ತೆ ಕಾಣುವ ಭಾಗ್ಯ ದೊರೆತಿದೆ. ಈ ಖುಷಿಯನ್ನು ಫೋಟೊದೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡ, ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ, ‘ನಿಸರ್ಗ ಹಿಂದೆ ಹೇಗಿತ್ತು, ಈಗ ಹೇಗೆ ಮಾಡಿದ್ದೇವೆ’ ಎಂದು ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.