ಟೋಕಿಯೊ: ಚೀನಾ ಮತ್ತು ಉತ್ತರ ಕೊರಿಯಾದಿಂದ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು ಜಪಾನ್ ದೇಶದೊಂದಿಗಿನ ಮೈತ್ರಿಯನ್ನು ಬಲಪಡಿಸಲು ಮತ್ತು ಪ್ರಾದೇಶಿಕ ರಕ್ಷಣೆಗೆ ಸಹಕರಿಸುವ ಭರವಸೆಯನ್ನು ಅಮೆರಿಕ ನೀಡಿದೆ ಎಂದು ಜಪಾನ್‌ನ ನೂತನ ಪ್ರಧಾನಿ ಫ್ಯೂಮಿಯೊ ಕಿಶಿದಾ ಹೇಳಿದರು.
ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬೈಡನ್ ಅವರೊಂದಿಗೆ 20 ನಿಮಿಷ ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಅವರು ಬಳಿಕ ಸುದ್ದಿಗಾರರಿಗೆ ಮಾತುಕತೆಯ ವಿವರ ನೀಡಿದರು.
‘ಜಪಾನ್ ನಿಯಂತ್ರಣದಲ್ಲಿರುವ ಪೂರ್ವ ಚೀನಾ ಸಮುದ್ರ ದ್ವೀಪ ಸೆಂಕಾಕುವನ್ನು ರಕ್ಷಿಸಲು ಅಮೆರಿಕ ಬದ್ಧವಾಗಿರುವ ಕುರಿತು ಬೈಡನ್ ಭರವಸೆ ನೀಡಿದ್ದಾರೆ‘ ಎಂದು ಹೇಳಿದರು. ಸದ್ಯ ಚೀನಾ ಕೂಡ, ಈ ದ್ವೀಪದ ರಕ್ಷಣೆಗೆ ಮುಂದಾಗಿದ್ದು, ಆ ಪ್ರದೇಶದಲ್ಲಿ ಕರಾವಳಿ ಕಾವಲು ಪಡೆಯ ಚಟುವಟಿಕೆಯನ್ನು ಹೆಚ್ಚಿಸಿದೆ.
ಸೆಕಾಂಕು ದ್ವೀಪ ಸೇರಿದಂತೆ ಜಪಾನ್ ರಕ್ಷಣೆಗೆ ಅಮೆರಿಕ ಬದ್ಧವಾಗಿದೆ ಎಂದು ಬೈಡನ್ ಅವರು ಬಲವಾಗಿ ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದ ಕಿಶಿದಾ, ‘ಚೀನಾ ಮತ್ತು ಉತ್ತರ ಕೊರಿಯಾದಂತಹ ನೆರೆಯ ದೇಶಗಳು ಒಡ್ಡುತ್ತಿರುವ ಸಾವಲುಗಳನ್ನು ಜಂಟಿಯಾಗಿ ನಿಭಾಯಿಸುವುದಾಗಿ ತಾವಿಬ್ಬರೂ ದೃಢಪಡಿಸಿದ್ದೇವೆ‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.