ADVERTISEMENT

ಬಿಹಾರ: ಜೆಡಿ(ಯು) ವಿದ್ಯಾರ್ಥಿ ನಾಯಕನಿಗೆ ಗುಂಡಿಕ್ಕಿ ಹತ್ಯೆ

ಪಿಟಿಐ
Published 11 ಮಾರ್ಚ್ 2020, 20:21 IST
Last Updated 11 ಮಾರ್ಚ್ 2020, 20:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಹೋಳಿ ಆಚರಣೆಯ ಸಂದರ್ಭದಲ್ಲಿ ಜನತಾದಳ(ಯು) ಪಕ್ಷದ ವಿದ್ಯಾರ್ಥಿ ಘಟಕದ ನಾಯಕನನ್ನು ಮಂಗಳವಾರ ರಾತ್ರಿಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಹೋಳಿ ಹಬ್ಬದ ಅಂಗವಾಗಿ ಹಾಕಲಾಗಿದ್ದ ಪೋಸ್ಟರ್‌ನಲ್ಲಿ ತಮ್ಮ ಹೆಸರಿರಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿ ಘಟಕದ ಮೂವರು ಸದಸ್ಯರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದರು.

‘ವಿದ್ಯಾರ್ಥಿ ನಾಯಕ ಕನ್ಹಯ್ಯ ಕೌಶಿಕ್‌ನನ್ನು ಮಂಗಳವಾರ ರಾತ್ರಿ ಪಟೇಲ್‌ ನಗರದ ಬಳಿ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧಅಮರ್‌ ಕಾಂತ್‌ ಝಾ ಮತ್ತು ಧರ್ಮೇಂದ್ರ‌ಎಂಬುವವರನ್ನು ಬಂಧಿಸಲಾಗಿದೆ. ಕನ್ಹಯ್ಯಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗುತ್ತಿರುವ ಪ್ರಕರಣದ ಪ್ರಮುಖ ಆರೋಪಿ ಕುಶ್‌ ತಲೆಮರೆಸಿಕೊಂಡಿದ್ದಾನೆ’ ಎಂದುಹಿರಿಯ ಪೊಲೀಸ್‌ ಅಧಿಕಾರಿ ರಾಜೇಶ್‌ ಸಿಂಗ್‌ ಪ್ರಭಾಕರ್‌ ತಿಳಿಸಿದರು.

ADVERTISEMENT

ಈ ಘಟನೆಯಲ್ಲಿ ಕನ್ಹಯ್ಯ ಸ್ನೇಹಿತನ ಮೇಲೆಯೂ ಕಿಡಿಕೇಡಿಗಳುಗುಂಡು ಹಾರಿಸಿದ್ದರು. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕನ್ಹಯ್ಯ ಹತ್ಯೆ ಖಂಡಿಸಿ, ಆತನ ಬೆಂಬಲಿಗರು ಬುಧವಾರ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.