ADVERTISEMENT

Jharkhand Rains: ಭಾರಿ ಮಳೆ; ವಸತಿ ಶಾಲೆಯಲ್ಲಿ ಸಿಲುಕಿದ್ದ 162 ಮಕ್ಕಳ ರಕ್ಷಣೆ

ಪಿಟಿಐ
Published 29 ಜೂನ್ 2025, 9:45 IST
Last Updated 29 ಜೂನ್ 2025, 9:45 IST
<div class="paragraphs"><p>ಜಾರ್ಖಂಡ್: ವಸತಿ ಶಾಲೆಯಲ್ಲಿ ಸಿಲುಕಿದ್ದ 162 ಮಕ್ಕಳ ರಕ್ಷಣೆ</p></div>

ಜಾರ್ಖಂಡ್: ವಸತಿ ಶಾಲೆಯಲ್ಲಿ ಸಿಲುಕಿದ್ದ 162 ಮಕ್ಕಳ ರಕ್ಷಣೆ

   

ಜೆಮ್‌ಶೆಡ್‌ಪುರ(ಜಾರ್ಖಂಡ್‌): ಜಾರ್ಖಂಡ್‌ನಲ್ಲಿ ಭಾರಿ ಮಳೆ ಸುರಿದು ಪ್ರವಾಹ ಉಂಟಾದ ಪರಿಣಾಮ, ಪೂರ್ವ ಸಿಂಗಭೂಮ್‌ ಜಿಲ್ಲೆಯ ಖಾಸಗಿ ವಸತಿ ಶಾಲೆಯೊಂದರಲ್ಲಿ ಸಿಲುಕಿದ್ದ 162 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ಧಾರೆ.

‘ಪ್ರವಾಹದಿಂದಾಗಿ, ಕೌವಾಲಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪಂಡರ್‌ಸೋಲಿ ಎಂಬಲ್ಲಿನ ಲವಕುಶ ವಸತಿ ಶಾಲೆಯು ಭಾಗಶಃ ಮುಳುಗಿ, ವಿದ್ಯಾರ್ಥಿಗಳು ಸಿಲುಕಿದ್ದರು. ಶಿಕ್ಷಕರು ಎಲ್ಲ ವಿದ್ಯಾರ್ಥಿಗಳನ್ನು ಶಾಲೆಯ ಚಾವಣಿಗೆ ಸ್ಥಳಾಂತರಿಸಿದ್ದರು. ರಾತ್ರಿಯಿಡೀ ಅವರು ಚಾವಣಿಯಲ್ಲಿ ಇದ್ದರು’ ಎಂದು ತಿಳಿಸಿದ್ದಾರೆ.

ADVERTISEMENT

‘ಈ ಕುರಿತು ಭಾನುವಾರ ಬೆಳಿಗ್ಗೆ 5.30ಕ್ಕೆ ಮಾಹಿತಿ ಲಭಿಸಿದ ತಕ್ಷಣ, ಪೊಲೀಸ್‌ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ಗ್ರಾಮಸ್ಥರ ನೆರವಿನಿಂದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ(ಗ್ರಾಮೀಣ) ರಿಷಭ ಗರ್ಗ್ ಹೇಳಿದ್ದಾರೆ.

ಜಾರ್ಖಂಡ್: ವಸತಿ ಶಾಲೆಯಲ್ಲಿ ಸಿಲುಕಿದ್ದ 162 ಮಕ್ಕಳ ರಕ್ಷಣೆ

ಜಾರ್ಖಂಡ್: ವಸತಿ ಶಾಲೆಯಲ್ಲಿ ಸಿಲುಕಿದ್ದ 162 ಮಕ್ಕಳ ರಕ್ಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.