ADVERTISEMENT

ಕೊಡತ್ತಾಯಿ ಸರಣಿ ಹತ್ಯೆ: ಹಲವೆಡೆ ಸಾಕ್ಷ್ಯ ಸಂಗ್ರಹ

ಜನರ ಗೇಲಿ, ನಿಂದನೆಗೆ ಸ್ತಿಮಿತ ಕಳೆದುಕೊಳ್ಳದ ಜೋಲಿ ಜೋಸೆಫ್‌!

ಪಿಟಿಐ
Published 12 ಅಕ್ಟೋಬರ್ 2019, 20:15 IST
Last Updated 12 ಅಕ್ಟೋಬರ್ 2019, 20:15 IST
   

ಕೋಯಿಕ್ಕೋಡ್‌: ಕೊಡತ್ತಾಯಿ ಸರಣಿ ಹತ್ಯೆಗೆ ಸಂಬಂಧಿಸಿದಂತೆ ಕೋಯಿಕ್ಕೋಡ್‌ ಜಿಲ್ಲೆಯ ಹಲವೆಡೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ.

ಮುಖ್ಯ ಆರೋಪಿ ಜೋಲಿ ಜೋಸೆಫ್‌ ಹಾಗೂ ಇನ್ನಿಬ್ಬರು ಆರೋಪಿಗಳಾದ ಎಂ.ಎಸ್‌.ಮ್ಯಾಥ್ಯೂ ಮತ್ತು ಪ್ರಾಜಿಕುಮಾರ್‌ ಅವರನ್ನು ಪೊಲೀಸರು ಮೊದಲು ಪೊನಮಟ್ಟಿಲ್‌ ಮನೆಗೆ ಕರೆತಂದರು.

ಇದೇ ಮನೆಯಲ್ಲಿ 2002ರಲ್ಲಿ ಜೋಲಿ ಜೋಸೆಫ್‌ ಪತಿ ರಾಯ್‌ ಅವರ ತಾಯಿ ಅಣ್ಣಮ್ಮ, 2008ರಲ್ಲಿ ರಾಯ್‌ ತಂದೆ ಟಾಮ್‌ ಥಾಮಸ್‌, 2011ರಲ್ಲಿ ರಾಯ್‌ ಆಹಾರ ಸೇವಿಸಿದ ನಂತರ ಮೃತಪಟ್ಟಿದ್ದರು. 2014ರಲ್ಲಿ ರಾಯ್‌ ಮಾವ ಮ್ಯಾಥ್ಯೂ, ಸಂಬಂಧಿಯೊಬ್ಬರ ಪತ್ನಿ ಸಿಲಿ ಹಾಗೂ ಆಕೆಯ ಒಂದು ವರ್ಷದ ಮಗಳು ಮೃತಪಟ್ಟಿ
ದ್ದರು.2017ರಲ್ಲಿ ರಾಯ್‌ ಸಂಬಂಧಿ ಶಾಜು ಎಂಬುವವರನ್ನು ಜೋಲಿ ಮದುವೆಯಾಗಿದ್ದರು.

ADVERTISEMENT

8 ವರ್ಷದ ಬಳಿಕ ಬಂಧನ: ಅಮೆರಿಕ ದಲ್ಲಿರುವ ರಾಯ್‌ ಸಹೋದರ ರೋಜೋ ನೀಡಿದ ದೂರಿನ ನಂತರ ನಡೆದಮರಣೋತ್ತರ ಪರೀಕ್ಷೆ ವೇಳೆ ರಾಯ್‌ ದೇಹದಲ್ಲಿ ಸಯನೈಡ್‌ ಅಂಶ ಪತ್ತೆಯಾಗಿತ್ತು. ನಂತರ ಅಕ್ಟೋಬರ್‌ 5ರಂದು ಜೋಲಿ ಯನ್ನು ಬಂಧಿಸಲಾಗಿತ್ತು. ಶನಿವಾರ ಆರೋಪಿಗಳನ್ನು ಶಾಜು ಅವರ ಮನೆ, ದಂತ ಚಿಕಿತ್ಸಾಲಯ, ರಾಷ್ಟ್ರೀಯ ತಾಂತ್ರಿಕ ಸಂಸ್ಥೆಗೆ ಕರೆದೊಯ್ದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಜೋಲಿ ಸುಳ್ಳು ಹೇಳಿದ್ದರು.

ಜನರಿಂದ ಗೇಲಿ: ಸಾಕ್ಷ್ಯ ಸಂಗ್ರಹಕ್ಕೆ ತೆರಳಿದ್ದ ಸಂದರ್ಭದಲ್ಲಿ ಆರೋಪಿ ಗಳನ್ನು ವೀಕ್ಷಿಸಲು ನೆರೆದಿದ್ದ ಜನರು, ಗೇಲಿ ಮಾಡಿದರು.

‘ಜೋಲಿ ಅವರನ್ನು ಮಾದರಿ ಸೊಸೆ ಎಂದು ತಿಳಿದುಕೊಂಡಿದ್ದೆವು. ಆದರೆ ಆಕೆಯ ಕೃತ್ಯ ಕೇಳಿ ಆಶ್ಚರ್ಯವಾಗುತ್ತಿದೆ’ ಎಂದು ಸ್ಥಳೀಯರು ಹೇಳಿದರು.

16ರವರೆಗೂ ಪೊಲೀಸ್‌ ವಶಕ್ಕೆ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಲಿ ಹಾಗೂ ಇನ್ನಿಬ್ಬರು ಆರೋಪಿಗಳನ್ನು ತಾಮರಶ್ಶೇರಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಅಕ್ಟೋಬರ್‌ 16ರವರೆಗೂ ಪೊಲೀಸ್‌ ವಶಕ್ಕೆ ನೀಡಿದೆ. ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ ಸಂದರ್ಭದಲ್ಲಿ ನ್ಯಾಯಾಲಯದ ಸುತ್ತ ಭಾರಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

‘ತಾನು ಯಾವುದೇ ತಪ್ಪು ಮಾಡಿಲ್ಲ, ಇಲಿಗಳನ್ನು ಕೊಲ್ಲಲು ನಾನು ಮ್ಯಾಥ್ಯೂಗೆ ಸಯನೈಡ್‌ ನೀಡಿದ್ದೆ’ ಎಂದು ಮಾಧ್ಯಮಗಳಿಗೆ ಆರೋಪಿ ಪ್ರಾಜಿಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.