ಪೊಲೀಸ್ ಅಧಿಕಾರಿ ಸಂದೀಪನ್ ಮತ್ತು ಜುಬಿನ್ ಗರ್ಗ್
Credit: Instagram/@sandipan_garg_aps
ಗುವಾಹಟಿ: ಜನಪ್ರಿಯ ಗಾಯಕ ಜುಬಿನ್ ಗರ್ಗ್ ಅವರ ಸೋದರ ಸಂಬಂಧಿ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಆಗಿರುವ ಸಂದೀಪನ್ ಅವರನ್ನು ವಿಶೇಷ ತನಿಖಾ ತಂಡ ( ಎಸ್‌ಐಟಿ) ಬುಧವಾರ ಬಂಧಿಸಿದೆ ಎಂದು ವರದಿಯಾಗಿದೆ.
ಕಾರ್ಯಕ್ರಮವೊಂದರ ನಿಮಿತ್ತ ಸಿಂಗಪುರಕ್ಕೆ ತೆರಳಿದ್ದ ಜುಬಿನ್, ಸೆಪ್ಟೆಂಬರ್ 19ರಂದು ಅಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ತನಿಖೆಗೆ ಸಹಕರಿಸುವಂತೆ ಸಿಂಗಪುರದಲ್ಲಿರುವ ಅಸ್ಸಾಮಿ ಸಮುದಾಯದ ಜನರಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮನವಿ ಮಾಡಿದ್ದರು.
ಅಸ್ಸಾಮಿ ಅನಿವಾಸಿ ಭಾರತೀಯ ರೂಪ ಕಮಲ್ ಕಲಿತಾ ಅವರನ್ನು ಎಸ್‌ಐಟಿ ಮುಂದೆ ಹಾಜರುಪಡಿಸಿದ ಒಂದು ದಿನದ ನಂತರ ಸಂದೀಪನ್ ಅವರನ್ನು ಬಂಧಿಸಲಾಗಿದೆ. ಎಸ್‌ಐಟಿಯಿಂದ ಸಮನ್ಸ್ ಪಡೆದ ಇತರ ಏಳು ಎನ್‌ಆರ್‌ಐಗಳು ಇನ್ನೂ ತನಿಖೆಗೆ ಹಾಜರಾಗಿಲ್ಲ.
ಜುಬಿನ್ ಗರ್ಗ್ ಸಾವು ಪ್ರಕರಣ ಸಂಬಂಧ ಈವರೆಗೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಜುಬಿನ್ ಅವರ ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮಾ ಮತ್ತು ಕಾರ್ಯಕ್ರಮದ ಆಯೋಜಕ ಶ್ಯಾಮಕಾನು ಮಹಾಂತ, ‘ಗರ್ಗ್ ಬ್ಯಾಂಡ್’ ತಂಡದ ಸದಸ್ಯರಾದ ಶೇಖರ್‌ಜ್ಯೋತಿ ಗೋಸ್ವಾಮಿ ಮತ್ತು ಅಮೃತಪ್ರಭಾ ಮಹಾಂತ ಅವರನ್ನೂ ಬಂಧಿಸಲಾಗಿದ್ದು, ಅವರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಅವರೂ 14 ದಿನಗಳವರೆಗೆ ಪೊಲೀಸ್ ವಶದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.