ADVERTISEMENT

ನ್ಯಾಯಾಧೀಶರ ಪತ್ನಿ, ಪುತ್ರನಿಗೆ ಗುಂಡಿಟ್ಟ ಗನ್‌ಮ್ಯಾನ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 14:51 IST
Last Updated 13 ಅಕ್ಟೋಬರ್ 2018, 14:51 IST
   

ಗುರುಗ್ರಾಮ: ಹೆಚ್ಚುವರಿ ಸೆಕ್ಷನ್ಸ್‌ ನ್ಯಾಯಾಧೀಶರ ಪತ್ನಿ ಮತ್ತು ಪುತ್ರನ ಮೇಲೆ ಗನ್‌ಮ್ಯಾನ್‌ ಗುಂಡು ಹಾರಿಸಿದ್ದಾನೆ. ಇಲ್ಲಿನ ಸೆಕ್ಟರ್‌ 49ರ ಆರ್ಕೇಡಿಯಾ ಮಾರ್ಕೆಟ್‌ನ ಹೊರಭಾಗದಲ್ಲಿ ಶನಿವಾರ ಈ ಘಟನೆ ನಡೆದಿದೆ.

ಶೂಟ್‌ಔಟ್‌ನಲ್ಲಿ ತಾಯಿ, ಮಗ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿರುವುದಾಗಿ ವರದಿಯಾಗಿದೆ.

ಗುಂಡು ಹಾರಿಸಿದ ಗನ್‌ಮ್ಯಾನ್‌, ಗುರುಗ್ರಾಮ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಎಂದು ತಿಳಿದು ಬಂದಿದೆ. ಆತನನ್ನು ಬಂಧಿಸಲಾಗಿದೆ.

ADVERTISEMENT

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.