ADVERTISEMENT

‘ಮಂದಿರವಲ್ಲ, ರೊಟ್ಟಿ, ಬಟ್ಟೆಯೇ ಚುನಾವಣಾ ವಿಚಾರ’

ಆನಂದ್ ಮಿಶ್ರಾ
Published 26 ನವೆಂಬರ್ 2018, 19:12 IST
Last Updated 26 ನವೆಂಬರ್ 2018, 19:12 IST
ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ    

*ಪ್ರತಿ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಗೆಲ್ಲುತ್ತದೆ ಎಂಬ ಗುಲ್ಲು ಎದ್ದು ಬಿಡುತ್ತದೆ. ಆದರೆ, ಕೊನೆಗೆ ಗೆಲುವು ಬಿಜೆಪಿಯದ್ದಾಗುತ್ತದೆ. 2008, 2013ರ ಚುನಾವಣೆಗಳಿಗಿಂತ ಈ ಬಾರಿ ಹೇಗೆ ಭಿನ್ನ?
ವ್ಯತ್ಯಾಸ ನಿಮ್ಮ ಕಣ್ಣ ಮುಂದೆಯೇ ಇದೆ. ಬೀದಿಗಳಲ್ಲಿ ಏನಾಗುತ್ತಿದೆ ನೋಡಿ, ರಸ್ತೆಗಳಲ್ಲಿ ಎಷ್ಟು ಜನರಿದ್ದಾರೆ ಗಮನಿಸಿ. ಜನರು ಹತಾಶರಾಗಿದ್ದಾರೆ. ಅವರು ಆಕ್ರೋಶಗೊಂಡಿದ್ದಾರೆ. ಈ ಸರ್ಕಾರವನ್ನು ಕಿತ್ತೆಸೆಯಲಿದ್ದಾರೆ.

*‘ಮಾಫ್‌ ಕರೋ ಮಹಾರಾಜ್‌, ಹಮಾರೆ ನೇತಾ ಶಿವರಾಜ್‌’ ಎಂಬುದು ಬಿಜೆಪಿಯ ಘೋಷಣೆ. ಕಾಂಗ್ರೆಸ್‌ನ ಮುಂದಾಳು ನೀವು ಎಂಬಂತೆ ಅವರು ಬಿಂಬಿಸಿದ್ದಾರೆ. ಹಾಗಿದ್ದರೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿಮ್ಮನ್ನು ಯಾಕೆ ಬಿಂಬಿಸಿಲ್ಲ?
ಈ ಪ್ರಶ್ನೆಗೆ ನಾನು ಬಹಳ ಸಲ ಬಹಳ ದೀರ್ಘವಾದ ಉತ್ತರ ಕೊಟ್ಟಿದ್ದೇನೆ. ನಾನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ. ಕಾಂಗ್ರೆಸ್‌ ಸರ್ಕಾರ ರಚನೆಯಾಗಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ.

*ಚುನಾವಣೆಗೆ ಮೊದಲು ಜೋರಾಗಿ ಕೇಳಿ ಬರುತ್ತಿರುವ ರಾಮಮಂದಿರ ನಿರ್ಮಾಣದ ಕೂಗು ಇಲ್ಲಿ ಪರಿಣಾಮ ಬೀರಲಿದೆಯೇ?
ರೊಟ್ಟಿ, ಬಟ್ಟೆ, ಸೂರು ಮತ್ತು ಭ್ರಷ್ಟಾಚಾರವೇ ಚುನಾವಣೆ ವಿಷಯ.

ADVERTISEMENT

*ಪ್ರತಿ ಬಾರಿಯೂ ‘ಬ್ರಾಂಡ್‌ ಶಿವರಾಜ್‌’ ಅನ್ನೇ ಮುಂದಿಟ್ಟುಕೊಂಡು ಬಿಜೆಪಿ ಗೆಲ್ಲುತ್ತಿದೆ. ‘ಬ್ರಾಂಡ್‌ ಶಿವರಾಜ್‌’ಗೆ ಈ ಬಾರಿ ಏನಾಗಲಿದೆ?
ಬ್ರಾಂಡ್‌ ಶಿವರಾಜ್‌ ಬಗ್ಗೆ ದಯವಿಟ್ಟು ನನ್ನಲ್ಲಿ ಕೇಳಬೇಡಿ. ನಾನು ಏನೇ ಹೇಳಿದರೂ ಅದು ರಾಜಕೀಯ ಪ್ರತಿಸ್ಪರ್ಧೆಯಿಂದ ಎಂದು ನೀವು ಭಾವಿಸಬಹುದು. ಈ ವ್ಯಕ್ತಿ 15 ವರ್ಷಗಳಿಂದ ಜನರನ್ನು ಭ್ರಮೆಯ ಬಲೆಯಲ್ಲಿ ಬಂಧಿಸಿಟ್ಟಿದ್ದಾರೆ. ಈ ಮಾಯಾಜಾಲವನ್ನು ಜನರು ಈ ಬಾರಿ ಮುರಿಯಲಿದ್ದಾರೆ.

*ನಿಮ್ಮ ಪ್ರಮುಖ ಎದುರಾಳಿ ಯಾರು– ಬಿಜೆಪಿ, ಆರ್‌ಎಸ್‌ಎಸ್‌ ಅಥವಾ ಚೌಹಾಣ್‌?
ಈಗಿನ ದುರಾಡಳಿತದ ವಿರುದ್ಧ ಜನರ ಹೋರಾಟವನ್ನು ನಾವು ಮುಂದಕ್ಕೆ ಒಯ್ಯುತ್ತಿದ್ದೇವೆ. ಈಗಿನ ಹೋರಾಟ ಬಿಜೆಪಿ ವಿರುದ್ಧ ಜನರ ಹೋರಾಟವಾಗಿ ಬದಲಾಗಿದೆ. ಬಿಜೆಪಿಯನ್ನು ಜನರು ಮತ್ತೆ ಸ್ವೀಕರಿಸುವ ಪ್ರಶ್ನೆಯೇ ಇಲ್ಲ. ‘ಈ ಬಾರಿ 200 ಸ್ಥಾನ’ ಎಂಬ ಬಿಜೆಪಿ ಘೋಷಣೆಯನ್ನು ಕೇಳುವವರೇ ಇಲ್ಲದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.