ಕಮಲ್ ಹಾಸನ್
ಚೆನ್ನೈ: ಸರ್ವಾಧಿಕಾರ ಮತ್ತು ಸನಾತನ ಧರ್ಮದ ಸಂಕೋಲೆಗಳನ್ನು ಮುರಿಯಲು ಶಿಕ್ಷಣವೊಂದೇ ಅಸ್ತ್ರ ಎಂದು ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷದ ಮುಖ್ಯಸ್ಥ, ನಟ ಕಮಲ್ ಹಾಸನ್ ಹೇಳಿದ್ದಾರೆ.
ಚೆನ್ನೈನಲ್ಲಿ ತಮಿಳು ನಟ ಸೂರ್ಯ ಅವರ ಅಗರಮ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರಾಜ್ಯಸಭಾ ಸಂಸದರೂ ಆಗಿರುವ ಕಮಲ್ ಹಾಸನ್, ‘ನೀಟ್ ವ್ಯವಸ್ಥೆ ಸಾಕಷ್ಟು ಮಕ್ಕಳಿಗೆ ವೈದ್ಯಕೀಯ ಶಿಕ್ಷಣದ ಪ್ರವೇಶವನ್ನು ತಡೆಯಿತು. ಆ ಪರೀಕ್ಷಾ ನಿಯಮವನ್ನು ಬದಲಾಯಿಸುವ ಶಕ್ತಿ ಶಿಕ್ಷಣದಿಂದ ಮಾತ್ರ ಹೊರಹೊಮ್ಮಲು ಸಾಧ್ಯ’ ಎಂದು ಹೇಳಿದರು.
‘ನೀಟ್ ವಿರುದ್ಧದ ಯುದ್ಧದಲ್ಲಿ ಅಗರಮ್ ಫೌಂಡೇಶನ್ ಕೂಡ ಏನು ಮಾಡಲೂ ಸಾಧ್ಯವಿಲ್ಲ. ಸರ್ವಾಧಿಕಾರ ಮತ್ತು ಸನಾತನ ಧರ್ಮದ ಸಂಕೋಲೆಗಳನ್ನು ಮುರಿಯುವ ಅಸ್ತ್ರ ಶಿಕ್ಷಣ ಮಾತ್ರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.