ADVERTISEMENT

ರಾಜ್ಯಸಭಾ ಸದಸ್ಯರಾಗಿ ಕಮಲ್ ಹಾಸನ್ ಪ್ರಮಾಣವಚನ ಸ್ವೀಕಾರ

ಪಿಟಿಐ
Published 25 ಜುಲೈ 2025, 6:01 IST
Last Updated 25 ಜುಲೈ 2025, 6:01 IST
<div class="paragraphs"><p>ಕಮಲ್ ಹಾಸನ್, ಹರಿವಂಶ್&nbsp;ನಾರಾಯಣ ಸಿಂಗ್‌</p></div>

ಕಮಲ್ ಹಾಸನ್, ಹರಿವಂಶ್ ನಾರಾಯಣ ಸಿಂಗ್‌

   

(ಪಿಟಿಐ ಚಿತ್ರ)

ನವದೆಹಲಿ: ತಮಿಳುನಾಡಿನಿಂದ ರಾಜ್ಯಸಭೆ ಸದಸ್ಯರಾಗಿ ನಟ, ರಾಜಕಾರಣಿ ಕಮಲ್ ಹಾಸನ್ ಇಂದು (ಗುರುವಾರ) ಪ್ರಮಾವಚನ ಸ್ವೀಕರಿಸಿದರು.

ADVERTISEMENT

ಮಕ್ಕಳ್ ನೀಧಿ ಮೈಯ್ಯಂ (ಎಂಎನ್‌ಎಂ) ಪಕ್ಷದ ಸ್ಥಾಪಕರೂ ಆಗಿರುವ ಕಮಲ್ ಹಾಸನ್ ಅವರಿಗೆ ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ನಾರಾಯಣ ಸಿಂಗ್‌ ಅವರು ಪ್ರಮಾಣವಚನ ಬೋಧಿಸಿದರು.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ತನ್ನ ಮಿತ್ರಪಕ್ಷವಾದ ಎಂಎನ್‌ಎಂ ಪಕ್ಷಕ್ಕೆ ಒಂದು ಸ್ಥಾನ ಬಿಟ್ಟುಕೊಟ್ಟಿತ್ತು. ಆ ಮೂಲಕ ರಾಜ್ಯಸಭೆಗೆ ಕಮಲ್‌ ಹಾಸನ್‌ ಅವರನ್ನು ಬೆಂಬಲಿಸಿತ್ತು.

ಈ ಹಿಂದೆ ಕಮಲ್ ಹಾಸನ್ ನೇತೃತ್ವದ ಎಂಎನ್‌ಎಂ ಪಕ್ಷದ ಜೊತೆ 2024ರ ಲೋಕಸಭಾ ಚುನಾವಣೆಗೆ ಮೊದಲು ಮಾಡಿಕೊಂಡ ಒಪ್ಪಂದಕ್ಕೆ ಅನುಗುಣವಾಗಿ ಆ ಪಕ್ಷಕ್ಕೆ ಒಂದು ಸ್ಥಾನ ಬಿಟ್ಟುಕೊಡಲಾಗಿದೆ ಎಂದು ಡಿಎಂಕೆ ಪಕ್ಷದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.