ADVERTISEMENT

‘ಕಾಮಸೂತ್ರ ಮತ್ತು ಕ್ರಿಸ್‌ಮಸ್‌’: ಕಾರ್ಯಕ್ರಮಕ್ಕೆ ಗೋವಾ ಚರ್ಚ್‌ ಖಂಡನೆ

ಪಿಟಿಐ
Published 24 ನವೆಂಬರ್ 2025, 14:19 IST
Last Updated 24 ನವೆಂಬರ್ 2025, 14:19 IST
   

ಪಣಜಿ: ಮುಂದಿನ ತಿಂಗಳು ಗೋವಾದಲ್ಲಿ ಆಯೋಜಿಸಿರುವ ‘ಕಾಮಸೂತ್ರದ ಕತೆಗಳು ಮತ್ತು ಕ್ರಿಸ್‌ಮಸ್ ಸಂಭ್ರಮಾಚರಣೆ’ ಕಾರ್ಯಕ್ರಮವನ್ನು ಗೋವಾ ಚರ್ಚ್‌ ಖಂಡಿಸಿದೆ.

ಕಾರ್ಯಕ್ರಮದ ಕುರಿತ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿರುವ ಜಾಹೀರಾತು ಬೇಜವಾಬ್ದಾರಿತನದಿಂದ ಕೂಡಿದೆ. ಅಶ್ಲೀಲ ಮತ್ತು ಸಂಬಂಧವಿಲ್ಲದ ವಿಷಯಗಳನ್ನು ಒಳಗೊಂಡಿದೆ ಎಂದು ಅದು ಸೋಮವಾರ ಹರಿಹಾಯ್ದಿದೆ.

‘ಕ್ರಿಸ್‌ಮಸ್‌, ಜಗತ್ತಿನಾದ್ಯಂತ ಇರುವ ಕ್ರಿಶ್ಚಿಯನ್ನರಿಗೆ ಪವಿತ್ರ ಸಮಯ. ಸಂತೋಷ, ಶಾಂತಿ ಮತ್ತು ದೇವರ ಪ್ರೀತಿಯನ್ನು ಸ್ಮರಿಸುವ ಋತು’ ಎಂದು ಆರ್ಚ್‌ಬಿಷಪ್‌ ಫಿಲಿಪ್‌ ನೇರಿ ಕಾರ್ಡಿನಲ್‌ ಫೆರಾವೊ ತಿಳಿಸಿದ್ದಾರೆ.

ADVERTISEMENT

ಈ ಬೆನ್ನಲ್ಲೇ, ನಾಲ್ಕು ದಿನ ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದು ಮಾಡಲು ಪೊಲೀಸರು ಆದೇಶಿಸಿದ್ದಾರೆ. ಭಗವಾನ್‌ ಶ್ರೀ ರಜನೀಶ್‌ ಪ್ರತಿಷ್ಠಾನ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಜಾಹೀರಾತು ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.